ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯಲಿ

hoskote
Published on

ಹೊಸಕೋಟೆ: ದುಡಿಯುವ ವರ್ಗಕ್ಕೆ ದೊರೆತ ಸೌಲಭ್ಯಗಳೆಲ್ಲ ಕಾರ್ಮಿಕರ ಹೋರಾಟದಿಂದಲೇ ದೊರೆತಿದ್ದು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದರು.

ನಗರದ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ತಾಲೂಕು ಕಚೇರಿಯವರೆಗೆ ಸಿಐಟಿಯು ಸಂಘಟನೆ ಮೆರವಣಿಗೆಯಲ್ಲಿ ತೆರಳಿ ದೇಶದ ಮೊದಲ ಕಾರ್ಮಿಕ ಸಚಿವ ಡಾ.ಬಿ.ಆರ್​.ಅಂಬೇಡ್ಕರ್​ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ನಂತರ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ಕಾನೂನುಗಳನ್ನು ತಿದ್ದುಪಡೆ ಮಾಡುವ ಮೂಲಕ ಕಾರ್ಮಿಕರಿಗೆ ಅನ್ಯಾಯ ಮಾಡಿ ಬಂಡವಾಳ ಶಾಹಿಗಳ ಪರ ನೆಡೆದುಕೊಳ್ಳುತ್ತಿದೆ. ಇದರಿಂದ ಕಾರ್ಮಿಕರಿಗೆ ಬಾರಿ ಅನ್ಯಾಯವಾಗುತಿದ್ದು, ಈ ಕಾರ್ಮಿಕ ವಿರೋಧಿ ಕಾನೂನುಗಳನ್ನು ವಾಪಸ್​ ಪಡೆಯಬೇಕು ಎಂದು ಆಗ್ರಹಿಸಿದರು.

ಮೇ 20ರಂದು ರಾಜ್ಯಾದ್ಯಂತ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದು, ಎಲ್ಲ ಕಂಡೆ ಬಂದ್​ ಮಾಡುವ ಮೂಲಕ ಸರ್ಕಾರಗಳಿಗೆ ಎಚ್ಚರಿಕೆ ನೀಡಬೇಕು ಎಂದು ಕರೆ ನೀಡಿದರು.

ಸಿಐಟಿಯು ತಾಲೂಕು ಅಧ್ಯಕ್ಷ ಹರೀಂದ್ರ ಮಾತನಾಡಿ, ಸರ್ಕಾರಗಳು ಕಾರ್ಮಿಕರ ಮಧ್ಯೆ ಕಂದಕ ನಿರ್ಮಿಸಲು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಕಾರ್ಮಿಕರಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿವೆ. ಆದರೆ ಈವರೆಗೆ ಕಾರ್ಮಿಕರಿಗೆ ದೊರೆತಿರುವ ಎಲ್ಲ ಸೌಲಭ್ಯಗಳನ್ನು ಕಾರ್ಮಿಕರೇ ಹೋರಾಟ ಮಾಡುವ ಮೂಲಕ ಪಡೆದುಕೊಂಡಿದ್ದು, ಸರ್ಕಾರಗಳು ಕಾಪೋರ್ರೇಟ್​ ಸಂಸ್ಥೆಗಳ ಅಡಿಯಾಳಾಗಿದೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net