

ಹಿರೇಕೆರೂರ: ಸಾಲ ತೆಗೆದುಕೊಂಡವರು ಸದ್ಬಳಕೆ ಮಾಡಿಕೊಂಡು ನಿಗದಿತ ಅವಧಿಯೊಳಗೆ ಮರುಪಾವತಿಸುವ ಮೂಲಕ ಸಂಘಗಳ ಪ್ರಗತಿಗೆ ಸಹಕರಿಸಬೇಕು ಎಂದು ಪ್ರಗತಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಅನ್ನಪೂರ್ಣಾ ಉಜನೇಶ್ವರ ಬಣಕಾರ ಹೇಳಿದರು.
ಪಟ್ಟಣದ ಪಿಎಲ್‌ಡಿ ಬ್ಯಾಂಕ್‌ನ ಬಿ.ಜಿ. ಬಣಕಾರ ಸಮುದಾಯ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಗತಿ ಮಹಿಳಾ ಸಹಕಾರ ಸಂಘದ 3ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಲು ಸದಸ್ಯರು, ಸಿಬ್ಬಂದಿ ಮತ್ತು ಆಡಳಿತ ಮಂಡಳಿಯ ದಕ್ಷತೆ, ಪ್ರಾಮಾಣಿಕ ಕರ್ತವ್ಯ ಮುಖ್ಯವಾಗಿದೆ ಎಂದರು.
ಸಂಘದ ಉಪಾಧ್ಯಕ್ಷೆ ಸುನಿತಾ ಕೊಡ್ಲೇರ, ನಿರ್ದೇಶಕರಾದ ನಿರ್ಮಲಾ ಗುಬ್ಬಿ, ರೇಣು ಮಾರೇರ, ಅರುಣಾ ಹಂಪಾಳಿ, ಸುಮಿತ್ರಾ ಪಾಟೀಲ, ಸುಜಾತಾ ಕೊಟಗಿಮನಿ, ರೂಪಾ ಆಡೂರ, ರತ್ನಮ್ಮ ಕೆರೂಡಿ, ಚೈತ್ರಾ ತಿಪ್ಪಕ್ಕಳವರ, ಕುಸುಮಾ ಮಾಳಕ್ಕನವರ, ರೇಣುಕಾ ಚಲವಾದಿ, ಮಮತಾ ತಿಪ್ಪಶೆಟ್ಟಿ ಇದ್ದರು. ವ್ಯವಸ್ಥಾಪಕಿ ರಂಜಿತಾ ಎಸ್.ಬಿ. ನಿರ್ವಹಿಸಿದರು.