ನಿಗದಿತ ಅವಧಿಯೊಳಗೆ ಸಾಲ ಮರುಪಾವತಿಸಿ

HKR BASAVESWAR BANK
Published on


ಹಿರೇಕೆರೂರ: ಕೇಂದ್ರೀಕೃತ ಬ್ಯಾಂಕ್​ಗಳಿಗೆ ಸ್ಪರ್ಧೆವೊಡ್ಡಲು ಬಡ್ಡಿದರ ನಿಗದಿಪಡಿಸಿ ಗ್ರಾಹಕರು ಮತ್ತು ಸಾಲಗಾರರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಬಸವೇಶ್ವರ ಸಹಕಾರಿ ಪತ್ತಿನ ಸಂಘದ ಮಾಜಿ ಅಧ್ಯಕ್ಷ ಚನ್ನವೀರಪ್ರಭು ಕುಬಸದ ಹೇಳಿದರು.
ಪಟ್ಟಣದ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಏರ್ಪಡಿಸಿದ್ದ ಬಸವೇಶ್ವರ ಸಹಕಾರಿ ಪತ್ತಿನ ಸಂಘದ ವಾರ್ಷಿಕ ಸಾಧಾರಣೆ ಸಭೆಯಲ್ಲಿ ಅವರು ಮಾತನಾಡಿದರು. ಈಗ 1ಲಕ್ಷ ರೂ.ಗಳಿಂದ 50 ಲಕ್ಷ ರೂ.ಗಳವರೆಗೆ ಸಾಲ ನೀಡಲಾಗುತ್ತಿದ್ದು, ಸದಸ್ಯರು ಇದರ ಲಾಭ ಪಡೆದುಕೊಳ್ಳಬೇಕು. ಸಭೆಯಲ್ಲಿ ಸಂಘದ ಸದಸ್ಯರು ನೀಡಿದ ಸಲಹೆ, ಸೂಚನೆಗಳನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಸಾಲಗಾರರು ನಿಗದಿತ ಅವಧಿಯೊಳಗೆ ಸಾಲ ಮರುಪಾವತಿಸಿ ಆರ್ಥಿಕ ಪ್ರಗತಿಗೆ ಸಹಕರಿಸಬೇಕು ಎಂದರು.
ಸಂಘದ ವ್ಯವಸ್ಥಾಪಕ ಶಿವಾನಂದ ಅಂಗಡಿ ಮಾತನಾಡಿ, ಸಂಘವು 2024 ರ ಮಾರ್ಚ್ 31ವರೆಗೆ 60,42,330 ಲಕ್ಷ ರೂ. ಷೇರು ಬಂಡವಾಳ ಹೊಂದಿದೆ. ಶೇ. 12ರಂತೆ ಡಿವಿಡೆಂಡ್ ಹಂಚಲು ಸೆ. 5ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ವನಿಸಲಾಗಿದೆ. ಕಳೆದ ವರ್ಷ 28,34,950 ಲಕ್ಷ ರೂ. ಲಾಭಗಳಿಸಿತ್ತು. ಈ ವರ್ಷ 29,17,352 ಲಕ್ಷ ರೂ. ಲಾಭ ಗಳಿಸಿದೆ. ಈ ಸಾಲಿನಲ್ಲಿ 32,35,44 ಕೋಟಿ ರೂ. ವಹಿವಾಟು ನಡೆಸಿದೆ ಎಂದರು.
ಸಂಘದ ಅಧ್ಯಕ್ಷ ನಾಗನಗೌಡ ತಿಪ್ಪಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಎಸ್.ವಿ. ಹಳಕಟ್ಟಿ, ನಿರ್ದೇಶಕರಾದ ವಿರೂಪಾಕ್ಷಪ್ಪ ಹಂಪಾಳಿ, ವೀರೇಶ ಹಂಚಿನ, ವಿ.ಐ. ಹಳ್ಳೂರ, ಅರುಣಕುಮಾರ ಹಮ್ಮಿಗಿ, ಚನ್ನವೀರಪ್ರಭು ಕುಬಸದ, ಡಿ.ಸಿ. ಕಲ್ಯಾಣಿ, ಎನ್.ಎಂ.ದಿಂದೇರ, ಎನ್.ಬಿ. ಮಾರವಳ್ಳಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net