

ಕಡೂರು: ಸಂಘದ ಷೇರುದಾರರ ಸಹಕಾರದಿಂದ ಆರಂಭಿಕದ ಸಂಘ ಪ್ರಗತಿಯತ್ತ ಸಾಗುತ್ತಿದೆ ಎಂದು ಶ್ರೀ ಬೀರಲಿಂಗೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಜಿ.ಜಯಪ್ಪ ತಿಳಿಸಿದರು.
ಶ್ರೀ ಬೀರಲಿಂಗೇಶ್ವರ ಸೌಹಾರ್ದ ಸಹಕಾರ ಸಂಘದ ಕಚೇರಿಯಲ್ಲಿ ನಡೆದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘವು ಈ ಸಾಲಿನಲ್ಲಿ 86 ಸಾವಿರ ರೂ. ನಿವ್ವಳ ಲಾಭಂಶಗಳಿಸಿದೆ. ಒಟ್ಟು 870 ಷೇರುದಾರರನ್ನು ಹೊಂದಿರುವ ಸಂಘದಲ್ಲಿ 62 ಲಕ್ಷ ರೂ. ಠೇವಣಿ ಇರಿಸಲಾಗಿದೆ. 29 ಲಕ್ಷ ರೂ. ಷೇರು ಬಂಡವಾಳವಿದ್ದು. 74 ಲಕ್ಷ ರೂ. ಸಾಲ ನೀಡಲಾಗಿದೆ. ಸಾಲ ಪಡೆದ ಸದಸ್ಯರು ನಿಗದಿತ ಅವಧಿಯೊಳಗೆ ಮರುಪಾವತಿಯಾದರೆ ಸಂಘವನ್ನು ಮತ್ತಷ್ಟು ಪ್ರಗತಿಯಡೆಗೆ ಅಭಿವೃದ್ಧಿ ಪಡಿಸಲು ಸಹಕಾರಿಯಾಗಲಿದೆ. ಈಗಾಗಲೇ ಉತ್ತಮ ವಹಿವಾಟು ನಡೆಸುತ್ತಿರುವ ಸಂಘಕ್ಕೆ ಎ ಗ್ರೇಡ್ ಮಾನ್ಯತೆ ಪಡೆದುಕೊಂಡಿದೆ ಎಂದರು.
ಸಂಘದ ಉಪಾಧ್ಯಕ್ಷ ಟಿ. ಪರಮೇಶ್ವಪ್ಪ, ನಿರ್ದೇಶಕರಾದ ಎಂ.ಹಾಲಪ್ಪ, ಕೆ.ಎಸ್.ಕುಮಾರ್, ಯೋಗೀಶ್, ಟಿ.ಆರ್.ಈಶ್ವರ್. ಲಿಂಗರಾಜು, ಕೆ.ಜಿ.ಮಂಜುನಾಥ್, ಕೆ.ಎನ್. ಹುಚ್ಚಪ್ಪ, ಬಿ. ಮಹೇಶ್ವರಪ್ಪ, ಮಾನಸ, ವೇದ ಹಾಗೂ ವ್ಯವಸ್ಥಾಪಕಿ ಸಿ.ಆರ್. ಸುಪ್ರಿಯಾ ಮತ್ತಿತರಿದ್ದರು.