ಸಕಾಲದಲ್ಲಿ ಸಾಲ ಮರು ಪಾವತಿಸಿ

SRI-1 (1) (2)
Published on

ಶೃಂಗೇರಿ: ಕಳೆದ ವರ್ಷ ಆರಂಭಿಸಿರುವ ಸೂಪರ್ ಮಾರ್ಕೆಟ್ ಷೇರುದಾರರಿಗೆ ಉತ್ತಮ ಸೇವೆ ನೀಡುತ್ತಿದ್ದು, ಸಂಘದ ಸೂಪರ್ ಮಾರ್ಕೆಟ್‌ನಲ್ಲಿ ಅಗತ್ಯ ವಸ್ತು ಖರೀದಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಹಾಲಂದೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಚ್.ನಟರಾಜ್ ಹೇಳಿದರು.

ಮೆಣಸೆಯಲ್ಲಿ ಏರ್ಪಡಿಸಿದ್ದ ಹಾಲಂದೂರು ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೂಪರ್ ಮಾರ್ಕೆಟ್ ಕಟ್ಟಡದ ಮೇಲ್ಬಾಗದಲ್ಲಿ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಸಂಘದ ಶಾಖೆ ಮೇಲ್ಬಾಗದಲ್ಲಿ ಸಭಾಂಗಣ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ರೈತರಿಗೆ ಗೊಬ್ಬರ, ಮೈಲುತುತ್ತಾದ ಮೇಲೆ ಸಾಲ ನೀಡಲಾಗಿದ್ದು, ರೈತರು ಸಕಾಲದಲ್ಲಿ ಸಾಲ ಮರು ಪಾವತಿ ಮಾಡಬೇಕು. ಶೂನ್ಯ ಬಡ್ಡಿದರದ ಸಾಲ ಸೌಲಭ್ಯ, ಜಿಲ್ಲಾ ಸಹಕಾರ ಬ್ಯಾಂಕ್‌ನಿಂದ ಮಂಜೂರು ಮಾಡದಿರುವುದರಿಂದ ರೈತರಿಗೆ ಹೊಸ ಸಾಲ ನೀಡಲು ಸಾಧ್ಯವಾಗುತ್ತಿಲ್ಲ. ಸಂಘದಲ್ಲಿ ಕಾಫಿ ಒಟಿ ಮಿಷನ್, ತೇವಾಂಶ ಸೌಲಭ್ಯ ಹಾಗೂ ಕರ್ಣಾಟಕ ಬ್ಯಾಂಕ್ ಎಟಿಎಂ ಸೌಲಭ್ಯ ನೀಡಲಾಗಿದೆ. ಸಂಘವು ಬೆಳೆ ಸಾಲ ಮರು ಪಾವತಿಯಲ್ಲಿ ನಿಗದಿತ ಗುರಿ ತಲುಪಿದೆ ಎಂದರು.

ಸಂಘದ ಉಪಾಧ್ಯಕ್ಷ ಎಂ.ರಮೇಶ್, ನಿರ್ದೇಶಕರಾದ ಎಂ.ಎನ್.ಚಂದ್ರಶೇಖರ್, ರಾಜೇಶ್, ಅಶೋಕ್.ಕೆ.ಎಸ್.ರಮೇಶ್, ಅಚ್ಚುತ ಸಂಘದ ಸಿಇಒ ರಜನಿ, ಸಿಬ್ಬಂದಿ ಅಕ್ಷತಾ, ಪ್ರಿಯಾ, ನಾಗರಾಜ್, ಮಧುಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net