ದುರಸ್ತಿಯಾದ ಬೋರ್‌ವೆಲ್..!

Repaired borewell..!
ಮುಧೋಳದ ಸಾಯಿ ನಗರದಲ್ಲಿ ದುರಸ್ತಿಗೊಂಡಿದ್ದ ಬೋರ್‌ವೆಲ್‌ಗೆ ಹೊಸ ಮೊಟಾರ್ ಅಳವಡಿಸಿ ನೀರು ಹೊರ ಬಂದಾಗ ಜನತೆ ನೀರು ಹಿಡಿಯಲು ಬಂದಿರುವುದು.
Published on

ಮುಧೋಳ: ಕೊಳವೆ ಬಾವಿಯ ಮೋಟರ್ ದುರಸ್ತಿ ಮಾಡಿಸಲು ಮೀನಾಮೇಷ ಎಣಿಸುತ್ತಿದ್ದ ಪರಿಣಾಮ ನಗರದ ಹಲವು ಗಲ್ಲಿಯಲ್ಲಿ ಉಂಟಾಗಿದ್ದ ಕುಡಿಯುವ ನೀರಿನ ಸಮಸ್ಯೆ ‘ವಿಜಯವಾಣಿ’ಯಲ್ಲಿ ವರದಿ ಪ್ರಕಟವಾದ ನಂತರ ಅಧಿಕಾರಿಗಳು ಎಚ್ಚೆತ್ತು ಶುಕ್ರವಾರ ಹೊಸ ಮೋಟರ್ ಅಳವಡಿಸಿ ನೀರಿನ ಸಮಸ್ಯೆ ಪರಿಹರಿಸಿದ್ದಾರೆ.

ನಗರದ ಸಾಯಿ ಹಾಗೂ ಫೈಜ್ ಬಡಾವಣೆ ಜನತೆ ಹಾಗೂ ವಿವಿಧ ಭಾಗದಲ್ಲಿ ಉಂಟಾಗಿದ್ದ ನೀರಿನ ಸಮಸ್ಯೆ ಬಗ್ಗೆ ಜನತೆ ಎಷ್ಟೇ ಮನವಿ ಮಾಡಿದ್ದರೂ ಸಮಸ್ಯೆ ಬಗೆಹರಿದಿರಲಿಲ್ಲ. ಈ ಬಗ್ಗೆ ‘ಬಸವಳಿದ ಮುಧೋಳ ಜನತೆ ಶೀರ್ಷಿಕೆಯಡಿ ಬುಧವಾರ (ಏ.3) ವರದಿ ಪ್ರಕಟಗೊಳಿಸಿದ ಬೆನ್ನಲ್ಲೇ ಶುಕ್ರವಾರ (ಏ.5)ರಂದು ಕೊಳವೆ ಬಾವಿಗೆ ಹೊಸ ಮೋಟರ್ ಅಳವಡಿಸಿಕೊಟ್ಟಿದ್ದಾರೆ. ಇದು ಜನತೆಯ ಶ್ಲಾಘನೆಗೆ ಪಾತ್ರವಾಗಿದೆ.


‘ಯಪ್ಪಾ ಉರಿ ಬಿಸಿಲ್ಯಾಗ, ನೀರಿಲ್ಲದೆ ಬಾಳ ತೊಂದರೆಯಾಗಿತ್ತು. ವಿಜಯವಾಣಿ ಪೇಪರ್‌ದಾಗ ವರದಿ ಬಂದ ಕೂಡಲೆ ನಗರಸಭೆಯೋರು ಹೊಸ ಮೋಟರ್ ಕೂಡಿಸಿ, ದುರಸ್ತಿ ಮಾಡಿದ್ದು ಬಾಳ ಸಂತೋಷ ಆತು’ ಎಂದು ಸಾಯಿ ನಗರ ನಿವಾಸಿಗಳು ಪತ್ರಿಕೆಗೆ ಧನ್ಯವಾದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net