ಕ್ವೀನ್ಸ್​ ರಸ್ತೆಯಲ್ಲಿರುವ ಪಾಲಿಕೆ ಕಛೇರಿಯ ಶೌಚಗೃಹ ದುರಸ್ತಿಗೊಳಿಸಿ

Toiled
Published on

ಬೆಂಗಳೂರು: ನಿತ್ಯ ನೂರಾರು ಜನರ ಓಡಾಟವಿರುವ ಕ್ವೀನ್ಸ್​ ರಸ್ತೆಯಲ್ಲಿರುವ ಪಾಲಿಕೆ ಕಚೇರಿ ಆವರಣ ಡೆಂಗ್ಯೂ ಭೀತಿ ಹುಟ್ಟಿಸುತ್ತಿದೆ ಎಂದು ಸಾರ್ವಜನಿಕರು ಅಲವತ್ತುಕೊಂಡಿದ್ದಾರೆ.

ಕಚೇರಿಯಲ್ಲಿ ಸಾರ್ವಜನಿಕರ ಬಳಕೆಗಿರುವ ಶೌಚಗೃಹದಲ್ಲಿ ಶುಚಿತ್ವ ಕಣ್ಮರೆಯಾಗಿದೆ. ನೀರಿನ ವ್ಯವಸ್ಥೆಯೂ ಇಲ್ಲವಾಗಿದ್ದು, ಬಳಕೆ ಮಾಡದಂತಾಗಿದೆ. ಪರಿಣಾಮ, ಮಳೆನೀರು ನಿಂತು ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಬದಲಾಗಿದೆ. ನಿರ್ವಹಣೆಯಿಲ್ಲದ ಕಾರಣ ಶೌಚಗೃಹದ ಸುತ್ತಮುತ್ತ ಮೂಗು ಮುಚ್ಚಿಕೊಂಡೇ ಓಡಾಡಬೇಕಾದ ಪರಿಸ್ಥಿತಿಯಿದೆ.

ಶೌಚಗೃಹ ಅನೇಕ ಸಮಯದಿಂದ ಪಾಳು ಬಿದ್ದಿದೆ. ಆದರೆ ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಯಾವೊಬ್ಬ ಅಧಿಕಾರಿಯೂ ಆಸಕ್ತಿ ತೋರುತ್ತಿಲ್ಲ. ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆ ಗಮನಹರಿಸಿ, ಶೌಚಗೃಹವನ್ನು ದುರಸ್ತಿಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net