

ಮುಂಡರಗಿ: ಪಟ್ಟಣದ ಕೊಪ್ಪಳ ಸರ್ಕಲ್‌ನ ಜೆ.ಎ. ಬೋರ್ಡಿಂಗ್ ಕಾಂಪ್ಲೆಕ್ಸ್ ಮುಂಭಾಗದ ರಸ್ತೆಯಲ್ಲಿ (ಗದಗ ರಸ್ತೆ) ಒಡೆದಿದ್ದ ಕುಡಿಯುವ ನೀರಿನ ಪೈಪ್ ಅನ್ನು ಪುರಸಭೆಯಿಂದ ಗುರುವಾರ ದುರಸ್ತಿಗೊಳಿಸಲಾಯಿತು.
ಹಲವು ತಿಂಗಳಿನಿಂದ ಪೈಪ್ ಒಡೆದು ಜೀವಜಲ ವ್ಯರ್ಥವಾಗಿ ಪೋಲಾಗುತ್ತಿತ್ತು. ಕುಡಿಯುವ ನೀರು ಪೋಲಾಗುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿತ್ತು. ಈ ಕುರಿತು ವಿಜಯವಾಣಿ ಜೂ. 25ರಂದು ‘ಪೈಪ್ ಒಡೆದು ಜೀವಜಲ ಪೋಲು’ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿದ ಪುರಸಭೆ ಜೂ. 26ರಂದು ಪೈಪ್ ದುರಸ್ತಿಗೊಳಿಸಿ ನೀರು ಪೋಲಾಗದಂತೆ ಕ್ರಮ ಕೈಗೊಂಡಿದೆ.