

ದೇವದುರ್ಗ: ತಾಲೂಕಿನ ಜಾಲಹಳ್ಳಿ ಪಟ್ಟಣದ 8ನೇ ವಾರ್ಡ್‌ನಲ್ಲಿ ಕುಡಿವ ನೀರು ಪೂರೈಸುವ ಪೈಪ್ ಒಡೆದಿದ್ದು, ಸರಿಪಡಿಸುವಂತೆ ಒತ್ತಾಯಿಸಿ ಗ್ರಾಪಂ ಕಾರ್ಯದರ್ಶಿ ಗುಂಡಪ್ಪಗೆ ವಾರ್ಡ್ ನಿವಾಸಿಗಳು ಸೋಮವಾರ ಮನವಿ ಸಲ್ಲಿಸಿದರು.
ಪಟ್ಟಣದ 8ನೇ ವಾರ್ಡ್‌ಗೆ ಪೈಪ್‌ಲೈನ್ ಒಡೆದು ಎಲ್ಲೆಂದರಲ್ಲಿ ನೀರು ಸೋರಿಕೆಯಾಗುತ್ತಿದೆ. ಇದರಿಂದ ಜನರಿಗೆ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಅಲ್ಲದೆ ಕಲುಷಿತ, ಜಂಗ್ ನೀರು ಮನೆಗೆ ಪೂರೈಕೆಯಾಗುತ್ತಿದ್ದು ಕುಡಿಯಲು ಯೋಗ್ಯವಾಗಿಲ್ಲ.
ಈ ಬಗ್ಗೆ ಅಧಿಕಾರಿಗಳು, ಸದಸ್ಯರಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಕೆಲ ತಿಂಗಳ ಹಿಂದೆ ಇದೇ ವಾರ್ಡ್‌ಗೆ ಅಶುದ್ಧ ನೀರು ಪೂರೈಕೆ ಮಾಡಿದ್ದರಿಂದ ಅದೇ ನೀರು ಕುಡಿದು 8 ಜನರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದ್ದರು. ಹಲವರಿಗೆ ವಾಂತಿ, ಬೇಧಿ ಕಾಣಿಸಿಕೊಂಡಿತ್ತು.
ಸದ್ಯ ಹಲವು ದಿನಗಳಿಂದ ಪೈಪ್‌ಲೈನ್ ಒಡೆದಿದ್ದರೂ ರಿಪೇರಿ ಮಾಡದ ಕಾರಣ ಅಂಥ ಘಟನೆ ಮತ್ತೆ ಮರುಕಳಿಸುವ ಆತಂಕವಿದೆ. ಆದ್ದರಿಂದ ತಕ್ಷಣ ಪೈಪ್‌ಲೈನ್ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿದರು. ನಿವಾಸಿಗಳಾದ ಅಮರೇಶ ನಾಯಕ, ತಿಮ್ಮಣ್ಣ ಗೋಸಲ್, ಆಂಜನೇಯ ರಾಂಪಳ್ಳಿ, ತಿಮ್ಮಣ್ಣ ತೆಂಗಂಡಿ ಇದ್ದರು.