ಹಾಳಾಗಿರುವ ರಸ್ತೆಗಳ ದುರಸ್ತಿಗೊಳಿಸಿ

20-05-Shiva-3
ನಗರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಡಾ.ಬಿ.ಆರ್.ಅಂಬೇಡ್ಕರ್ ಸೇನಾ ಸಮಿತಿಯಿಂದ ಸೋಮವಾರ ಮನವಿ ಸಲ್ಲಿಸಲಾಯಿತು. ಸಮಿತಿ ಜಿಲ್ಲಾಧ್ಯಕ್ಷ ಆನಂದ ಏಗನೂರು, ಪದಾಕಾರಿಗಳಾದ ಕರಿಯಪ್ಪ ಅಸ್ಕಿಹಾಳ, ಪರಮೇಶ, ರಂಗಪ್ಪ ಅಸ್ಕಿಹಾಳ ಇದ್ದರು.
Published on

ರಾಯಚೂರು: ನಗರದಲ್ಲಿನ ರಸ್ತೆಗಳು ಹಾಳಾಗಿದ್ದು, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮತ್ತಷ್ಟು ಹಾಳಾಗಿ ವಾಹನ ಸಂಚಾರಕ್ಕೆ ಸಮಸ್ಯೆಯುಂಟಾಗಿದೆ. ಕೂಡಲೇ ಹಾಳಾಗಿರುವ ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಸೇನಾ ಸಮಿತಿ ಒತ್ತಾಯಿಸಿದೆ.
ಸಮಿತಿ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಸೋಮವಾರ ಮನವಿ ಸಲ್ಲಿಸಿ, ಸಾಧಾರಣ ಮಳೆಗೆ ರಸ್ತೆಗಳಲ್ಲಿ ಓಡಾಡದಂತಹ ಸ್ಥಿತಿ ಉಂಟಾಗಿದ್ದು, ಮಳೆಗಾಲದಲ್ಲಿ ಮತ್ತಷ್ಟು ಸಮಸ್ಯೆಯುಂಟಾಗಲಿದೆ. ಕೂಡಲೇ ದುರಸ್ತಿಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಳೆದ ಮುರ‌್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಆರ್‌ಟಿಒ ವೃತ್ತ, ಶಂಶಾಲಂ ದರ್ಗಾ ಮುಂಭಾಗದ ರಸ್ತೆ, ಹತ್ತಿ ಮಾರುಕಟ್ಟೆ ಹತ್ತಿರದ ರೈಲ್ವೆ ಸೇತುವೆ ಕೆಳಭಾಗದ ರಸ್ತೆಗಳಲ್ಲಿ ದೊಡ್ಡ ತಗ್ಗುಗಳು ಬಿದ್ದು ವಾಹನ ಸಂಚಾರಕ್ಕೆ ಅನಾನುಕೂಲವಾಗಿದೆ.
ಜತೆಗೆ ನಗರದಲ್ಲಿನ ಹಲವು ರಸ್ತೆಗಳಲ್ಲಿ ಚರಂಡಿ ನೀರು ರಸ್ತೆಗೆ ಹರಿದು ಕಾಲಿಡಲು ಸಾಧ್ಯವಾಗ ಸ್ಥಿತಿಯಿದೆ. ಕೂಡಲೇ ದುಸ್ಥಿತಿಯಲ್ಲಿರುವ ರಸ್ತೆಗಳನ್ನು ಗುರುತಿಸಿ ಶಾಶ್ವತ ದುರಸ್ತಿಗೆ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಆನಂದ ಏಗನೂರು, ಪದಾಕಾರಿಗಳಾದ ಕರಿಯಪ್ಪ ಅಸ್ಕಿಹಾಳ, ಪರಮೇಶ, ರಂಗಪ್ಪ ಅಸ್ಕಿಹಾಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net