ಬಡಿಕಮಾನ್​& ಅತಾವುಲ್ಲಾ ರಸ್ತೆ ದುರಸ್ತಿಗೊಳಿಸಿ

Repair Badikaman & Ataullah Road
Published on

ವಿಜಯಪುರ:ನಗರದ ಬಡಿಕಮಾನ& ಅತಾವುಲ್ಲಾ ವೃತ್ತದ ಮುಖ್ಯ ರಸ್ತೆ ದುರಸ್ತಿಪಡಿಸಬೇಕೆಂದು ಆಗ್ರಹಿಸಿ ಸ್ಥಳಿಯ ನಿವಾಸಿಗಳು ಸೋಮವಾರ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದರು.ಇರಫಾನ್​ ಶೇಖ್​ ನೇತೃತ್ವ ವಹಿಸಿ ಮಾತನಾಡಿ, ಇಲ್ಲಿನ ವಾರ್ಡ್​ ನಂ. 23, 24 ಹಾಗೂ 25 ರಲ್ಲಿ ಬರುವ ಮುಖ್ಯ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಈ ಮಾರ್ಗದಲ್ಲಿ ಸಂಚರಿಸುವ ಜನತೆ, ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಮೂರು ವರ್ಷಗಳಿಂದಲೂ ಈ ರಸ್ತೆ ದುರಸ್ತಿಯಲ್ಲಿದ್ದರೂ ನಗರ ಶಾಸಕರು ಗಮನಿಸುತ್ತಿಲ್ಲ ಎಂದು ದೂರಿದರು.

ಇಲಿಯಾಸ್​ ಸಿದ್ದಿಕಿ ಮಾತನಾಡಿ, ಮುಖ್ಯ ಮಾರ್ಗದಲ್ಲೇ ಆಳವಾದ ತಗ್ಗು ಗುಂಡಿಗಳಿವೆ. ಮಳೆಗಾಲದಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಕೆಲವರು ರಸ್ತೆಯಲ್ಲಿ ಬಿದ್ದು ಗಾಯಗೊಂಡ ಉದಾಹರಣೆಗಳು ಇವೆ. ಈ ರಸ್ತೆಯಲ್ಲಿ ಜೀವಹಾನಿ ಆಗುವ ಮುನ್ನವೇ ಪಾಲಿಕೆ ಆಯುಕ್ತರು ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಬಳಿಕ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಶ್ರೀ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಹಾಫಿಜ್​ ಸಿದ್ದಿಕಿ, ಆಸಿಫ್​ ಇನಾಮದಾರ, ಯಾಕುಬ್​ ನಾಟಿಕಾರ, ಜಿಯಾವುಲ್ಲಾ ಪಠಾಣ ಸ್ಥಳಿಯ ನಿವಾಸಿಗಳು ಇದ್ದರು.

ವಿಜಯಪುರದ ಬಡಿಕಮಾನ್​ ಬಳಿಯ ಮುಖ್ಯ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಸ್ಥಳಿಯ ನಿವಾಸಿಗಳು ಪ್ರತಿಭಟನೆ ನಡೆಸಿ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿಗೆ ಮನವಿ ಸಲ್ಲಿಸಿದರು. ಇರಫಾನ್​ ಶೇಖ್​, ಇಲಿಯಾಸ್​ ಸಿದ್ದಿಕಿ, ಹಾಫಿಜ್​ ಸಿದ್ದಿಕಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net