ರೇಣುಕಾಪ್ರಿಯ ಗ್ರಂಥ ಲೋಕಾರ್ಪಣೆ

Renukapriya Granth Lokarpane
Renukapriya Granth Lokarpane
Published on

ಗುಳೇದಗುಡ್ಡ: ಪಂಚಪೀಠಗಳ ಬಗ್ಗೆ ಅಪಾರ ಒಲವು ಹೊಂದಿದ್ದ ಮೃತುಂಜಯಸ್ವಾಮಿ ಬಸಯ್ಯಸ್ವಾಮಿ ಹಿರೇಮಠ ತಮ್ಮ ಸಾಮಿಪ್ಯಕ್ಕೆ ಬಂದ ಎಲ್ಲರಿಗೂ ಅವುಗಳ ಬಗ್ಗೆ ಜ್ಞಾನ ತುಂಬುತ್ತಿದ್ದರು ಎಂದು ಅಮರೇಶ್ವರ ಮಠದ ಶ್ರೀ ನೀಲಕಂಠ ಸ್ವಾಮಿಗಳು ಹೇಳಿದರು.

ಪಟ್ಟಣದ ಜಗದ್ಗುರು ರೇಣುಕಾಚಾರ್ಯ ಮಂದಿರದ ನಿರ್ಮಾತೃ ವೇದಮೂರ್ತಿ ಮೃತುಂಜಯಸ್ವಾಮಿ ಬಸಯ್ಯಸ್ವಾಮಿ ಹಿರೇಮಠ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಹಾಗೂ ಡಾ.ಪರಮೇಶ್ವರಿ ಹಿರೇಮಠ ಅವರು ಬರೆದ ಶ್ರೀ ರೇಣುಕಪ್ರಿಯ ಸಂಸ್ಮರಣ ಗ್ರಂಥದ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮತನಾಡಿದರು.

ಅವರ ಮಗಳಿಗೂ ಒಳ್ಳೆಯ ಸಂಸ್ಕಾರ ನೀಡಿ ಧರ್ಮವನ್ನು ಮುನ್ನಡೆಸಿಕೊಂಡು ಹೋಗಲು ದಾರಿದೀಪವಾದವರು. ತಂದೆಗೆ ತಕ್ಕ ಮಗಳಾಗಿ ದಾನ ಧರ್ಮ ಆಚಾರ-ವಿಚಾರಗಳ ಬಗ್ಗೆ, ವೀರಶೈವ ಧರ್ಮದ ಇಷ್ಟಲಿಂಗಧಾರಣೆ, ಇಷ್ಟಲಿಂಗ ಪೂಜಾ ವಿಧಾನ, ಅದರಿಂದಾಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.

ಮಾಜಿ ಶಾಸಕ ರಾಜಶೇಖರ ಶೀಲವಂತ ಮತನಾಡಿ, ಗ್ರಂಥವು ವೀರಶೈವ ಧರ್ಮದ ಪ್ರಾಚೀನತೆ, ಐತಿಹಾಸಿಕತೆಯ ಕುರಿತು ಸಾಕ್ಷಾಧಾರ ಒಳಗೊಂಡ ಅಪೂರ್ವ ಕೃತಿಯಾಗಿದೆ. ಈ ಕೃತಿಯು ಅನೇಕ ಸಂಶೋಧಕರ ವಿಶ್ಲೇಷಣಾತ್ಮಕ ಬರವಣಿಗೆ ಹೊಂದಿದೆ. ಶಿಕಾಗೋ ಮತ್ತು ಲಂಡನ್‌ನಿಂದಲೂ ಲೇಖನಗಳನ್ನು ಇಲ್ಲಿ ಕೊಡಮಾಡಿದ್ದಾರೆ. ಇದು ವೀರಶೈವ ಧರ್ಮದ ಕುರಿತು ಒಂದು ಅಭೂತಪೂರ್ಣವಾದ ಐತಿಹಾಸಿಕ ಸಾಕ್ಷಾಧಾರಗಳುಳ್ಳ ಕೃತಿಯಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಗ್ರಂಥದಲ್ಲಿನ ಲೇಖನಗಳು ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲ, ಅವೆರಡೂ ಒಂದೇ ಎಂದು ಸ್ಪಷ್ಟವಾಗಿ ನಿರೂಪಿಸಿವೆ ಎಂದರು.

ಧರ್ಮಸಭೆ ಸಾನ್ನಿಧ್ಯವನ್ನು ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು, ಕಾಶಿನಾಥ ಮಹಾಸ್ವಾಮಿಗಳು, ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಕಾಡಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.

ಎಸ್.ಆರ್. ಪಟ್ಟಣಶೆಟ್ಟಿ, ಮಹಾಲಿಂಗಯ್ಯ ಹೊಸಮಠ, ವಿ.ಜಿ. ಮಠಪತಿ, ದ್ರಾಕ್ಷಾಯಿಣಿ ಹಿರೇಮಠ, ಸುವರ್ಣ ಹಿರೇಮಠ, ಎಸ್.ಎಮ್. ಗಣಾಚಾರಿ, ಡಾ.ವಿ.ಎ. ಬೆನಕನಾಳ, ವೀರಭದ್ರಯ್ಯ ಚಂದ್ರಶೇಖರಯ್ಯ ಹೊಸಮಠ, ಡಾ. ಪರಮೇಶ್ವರಿ ಹಿರೇಮಠ, ಬಿ.ಪಿ.ಹಳ್ಳೂರ, ಶಿವಾನಂದಯ್ಯ ಮಳಿಮಠ, ವಿಶ್ವನಾಥ ಹಿರೇಮಠ ಇದ್ದರು.

ಸಂಗನಬಸವೇಶ್ವರ ಭಜನಾ ಮಂಡಳಿ ಹಾಗೂ ಜ್ಞಾನ ಸಿಂಧು ಕಲಾಬಳಗದಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net