

ಕಿಕ್ಕೇರಿ: ಕಿಕ್ಕೇರಿ ಗ್ರಾಪಂ ಉಪಾಧ್ಯಕ್ಷರಾಗಿ ಜೆಡಿಎಸ್ ಬೆೆಂಬಲಿತ ಸದಸ್ಯೆ ಎಂ.ವಿ.ರೇಣುಕಮ್ಮ ಅವಿರೋಧವಾಗಿ ಆಯ್ಕೆಯಾದರು.
ಜ್ಯೋತಿ ದಯಾನಂದ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ರೇಣುಕಮ್ಮ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾದರು. ಒಟ್ಟು 16 ಸದಸ್ಯರು ಇರುವ ಗ್ರಾಪಂನಲ್ಲಿ 4 ಸದಸ್ಯರು ಗೈರಾಗಿದ್ದರು. ಚುನಾವಣಾಧಿಕಾರಿಯಾಗಿ ಸಿಡಿಪಿಒ ಅರುಣ್‌ಕುಮಾರ್, ಸಹ ಚುನಾವಣಾಧಿಕಾರಿಯಾಗಿ ಅನಿಲ್‌ಬಾಬು, ಪಿಡಿಒ ಚಲುವರಾಜು ಕಾರ್ಯ ನಿರ್ವಹಿಸಿದರು.
ಅಧ್ಯಕ್ಷ ಕೆ.ಆರ್.ಕೃಷ್ಣ, ಸದಸ್ಯರಾದ ಎಸ್.ಕೆ.ಬಾಲಕೃಷ್ಣ, ಕೆ.ಆರ್.ರಾಜೇಶ್, ಕೆ.ಜಿ.ಪುಟ್ಟರಾಜು, ಕೆ.ಬಿ.ಚಂದ್ರಶೇಖರ್, ಭಾರತಿ ಪ್ರಕಾಶ್, ಸಿ.ಬಿ.ಸರಸ್ವತಿ, ಸಿ.ಎಲ್.ಜ್ಯೋತಿ, ಪದ್ಮಾವತಿ, ಬಿ.ತಾಯಮ್ಮ, ಮುಖಂಡರಾದ ಅನಂತು, ಗೋವಿಂದರಾಜು ಮತ್ತಿತರರಿದ್ದರು.