

ಲಕ್ಷೆ್ಮೕಶ್ವರ: ಪಟ್ಟಣದಲ್ಲಿ ಏ. 28ರಂದು ಸೋಮವಾರ ಪಟ್ಟಣದ ಶ್ರೀ ರಂಭಾಪುರಿ ಲಿಂ. ವೀರಗಂಗಾಧರ ಕಲ್ಯಾಣ ಮಂಟಪದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತ್ಯುತ್ಸವ ಆಚರಿಸಲು ನಿರ್ಧರಿಸಲಾಯಿತು.
ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, ಜಗತ್ತಿಗೆ ಶಾಂತಿ ಸಂದೇಶ ಸಾರಿದ ವೀರಶೈವ ಮತಸಂಸ್ಥಾಪಕ, ವಿಶ್ವ ಕಲ್ಯಾಣ ಯೋಗೀಶ್ವರರಾದ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ವವ ಆಚರಿಸುವುದು ನಮ್ಮೆಲ್ಲರ ಕರ್ತವ್ಯ. ಆಡಂಬರಕ್ಕೆ ಅವಕಾಶ ನೀಡದೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ರೇಣುಕಾಚಾರ್ಯರ ಜಯಂತ್ಯುತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.
ಅಂದು ಬೆಳಗ್ಗೆ ಶ್ರೀ ಸೋಮೇಶ್ವರ ತೇರಿನ ಮನೆಯ ಆವರಣದಿಂದ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ಪೂರ್ಣಕುಂಭ ಮತ್ತು ಸಕಲ ವಾದ್ಯ ವೈಭವಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಮುದಾಯ ಭವನ ತಲುಪುವುದು. ತದನಂತರ ನಡೆಯುವ ಧರ್ಮಸಭೆಯ ಸಾನ್ನಿಧ್ಯವನ್ನು ಮುಕ್ತಿಮಂದಿರದ ಪಟ್ಟಾಧ್ಯಕ್ಷ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ವಹಿಸುವರು. ಶ್ರೀ ಕರೇವಾಡಿಮಠದ ಶ್ರೀ ಮಳೆ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಉಪಸ್ಥಿತರಿರುವರು. ಗಣ್ಯರು, ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ಸಂಘಟಕರು ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ಆನಂದ ಮೆಕ್ಕಿ, ಎಸ್.ಎಸ್. ಬಾಳೆಹಳ್ಳಿಮಠ, ಕುಬೇರಪ್ಪ ಮಹಾಂತಶೆಟ್ಟರ, ಚಂಬಣ್ಣ ಬಾಳಿಕಾಯಿ, ಬಸವೇಶ ಮಹಾಂತಶೆಟ್ಟರ, ಸಿ.ಆರ್. ಲಕ್ಕುಂಡಿಮಠ, ಚನ್ನಪ್ಪ ಕೋಲಕಾರ, ರುದ್ರುಸ್ವಾಮಿ ಘಂಟಾಮಠ, ಎಸ್.ವಿ. ಅಂಗಡಿ, ಬಸವರಾಜ ಬೆಂಡಿಗೇರಿ, ಗಂಗಾಧರ ಮೆಣಸಿನಕಾಯಿ, ಐ.ಸಿ. ಹತ್ತಿಕಾಳ, ಎನ್.ವಿ. ಹೇಮಗಿರಿಮಠ, ಎಂ.ಕೆ. ಕಳ್ಳಿಮಠ ಸೇರಿ ವಿವಿಧ ಸಮಾಜ ಮುಖಂಡರು ಇದ್ದರು.