

ರಬಕವಿ/ಬನಹಟ್ಟಿ: ಆಚಾರ ವಿಚಾರಗಳನ್ನು ಹಾಗೂ ಮಾನವೀಯ ಮೌಲ್ಯಗಳನ್ನು ಜಗಕ್ಕೆ ಸಾರಿದವರು ಜಗದ್ಗುರು ಶ್ರೀ ರೇಣುಕಾಚಾರ್ಯರು ಎಂದು ತೇರದಾಳ ನಾವಲಗಿ ಹಿರೇಮಠದ ಗಂಗಾಧರ ಶ್ರೀಗಳು ಹೇಳಿದರು.
ತಾಲೂಕಿನ ನಾವಲಗಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೇಣುಕಾಚಾರ್ಯರಂತಹ ಮಹಾತ್ಮರ ಧನಾತ್ಮಕ ಚಿಂತನೆಯಿಂದ ವೀರಶೈವ ಧರ್ಮ ಸಂಸ್ಥಾಪನೆಗೊಂಡಿದೆ. ಇಂತಹ ಮಹಾತ್ಮರ ತತ್ವ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸನ್ಮಾರ್ಗದ ಹಾದಿಯಲ್ಲಿ ನಡೆಯಬೇಕು. ರೇಣುಕಾಚಾರ್ಯರು ಕೃತಾಯುಗದಲ್ಲಿ ಏಕಾಕ್ಷರಿಯಾಗಿ, ತೇತ್ರಾಯುಗದಲ್ಲಿ ಏಕವಕ್ಕರಾಗಿ, ದ್ವಾಪಾರಯುಗದಲ್ಲಿ ರೇಣುಕರಾಗಿ, ಕಲಿಯುಗದಲ್ಲಿ ರೇವಣಸಿದ್ದರಾಗಿ ಅವತರಿಸಿ ಅಷ್ಟ ಸಿದ್ಧಿಗಳನ್ನು ಪಡೆದ ಮಹಾತ್ಮರಾಗಿದ್ದಾರೆ ಎಂದರು.
ಶ್ರೀಶೈಲಯ್ಯ ಹಿರೇಮಠ, ಗುರು ಮರಡಿಮಠ, ಸೋಮಯ್ಯ ಹಿರೇಮಠ, ಬಸಯ್ಯ ಮಠಪತಿ, ಮಹಾಂತೇಶ ಕಾಡದೇವರ, ಎಂ. ಆರ್. ವಾಲಿ, ದಾನಪ್ಪ ಆಸಂಗಿ, ಕಲ್ಮೇಶ ದೇವದಾಸ, ಮಲ್ಲಪ್ಪ ಮಗದುಮ್, ಗಿರೀಶ ಪಟ್ಟಣಶೆಟ್ಟಿ ಮತ್ತಿತರರಿದ್ದರು.