ಬಿಜೆಪಿಯಲ್ಲಿ ನಾವೆಲ್ಲ ಸಿಂಹದ ಮರಿಗಳು, ಆದ್ರೂ ಮಂತ್ರಿ ಸ್ಥಾನ ಸಿಕ್ಕಿಲ್ಲ!

renukacharya
Published on

ಬೆಂಗಳೂರು: ಸಂಘಟನೆ ಮತ್ತು ಪಕ್ಷ ತಾಯಿ ಸಮಾನ. ನನಗೆ ಅನ್ಯಾಯವಾದ ಬಗ್ಗೆ ನಮ್ಮ ನಾಯಕರ ಮುಂದೆ ಹೇಳಿಕೊಂಡಿದ್ದೇನೆ. ಸಂಪುಟದಲ್ಲಿ ಕೆಲವರಿಗೆ ಎರಡು ಮೂರು ಖಾತೆಗಳಿವೆ. ಹಾಗಂತ ನನಗೆ ಅಸಮಾಧಾನವಿಲ್ಲ. ಇನ್ನು 6 ಖಾತೆಗಳು ಖಾಲಿ ಇವೆ. ಖಾಲಿ ಇರುವ ಸಚಿವ ಸ್ಥಾನ ಭರ್ತಿ ಮಾಡಬೇಕು ಎಂದು ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪರೋಕ್ಷವಾಗಿ ಶಾಸಕ ರೇಣುಕಾಚಾರ್ಯ ಅಸಮಾಧಾನ ಹೊರ ಹಾಕಿದರು.

ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಬಿಎಸ್​​ವೈ, ಸದ್ಯ ಬೊಮ್ಮಾಯಿ‌ ಅಧಿಕಾರ ಗಟ್ಟಿಯಾಗಿದೆ. ಖಾಲಿಯಿರುವ ಖಾತೆಯ ಬಗ್ಗೆ ಪಕ್ಷದಲ್ಲಿ ಈಶ್ವರಪ್ಪ, ಜಾರಕಿಹೊಳಿ ಯಾರು ಅಸಮಾಧಾನ ಹೊಂದಿಲ್ಲ. ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಕಳೆದ ವಾರ ಮುಖ್ಯಮಂತ್ರಿ ಹೇಳಿದ್ದಾರೆ.

ಬಿಜೆಪಿಯಲ್ಲಿ ನಾವೆಲ್ಲ ಸಿಂಹದ ಮರಿಗಳು. ಬಿಎಸ್‌ವೈ ಮುಖ್ಯಮಂತ್ರಿಯಾದಾಗ ನನಗೆ ಸಚಿವ ಸ್ಥಾನ ಕೊಡಬೇಕಿತ್ತು. ಪಕ್ಷಕ್ಕಾಗಿ ಹಗಲು ರಾತ್ರಿ ದುಡಿದಿದ್ದೇನೆ. ಆದರೂ ನನಗೆ ಅಧಿಕಾರ ವಂಚನೆಯಾಗಿದೆ. ಹಾಗಂತ‌ ನಾನು ಬಂಡಾಯ ಎದ್ನಾ? ಬಿಎಸ್‌ವೈ ವಿರುದ್ದ ಮಾತನಾಡಿದ್ನಾ? ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net