ಸಾಸ್ವೆಹಳ್ಳಿಯಲ್ಲಿ ಕಳಪೆ ಕಾಮಗಾರಿಗೆ ಆಕ್ಷೇಪ

25 svl
Published on

ಸಾಸ್ವೆಹಳ್ಳಿ: ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಬಾಕ್ಸ್ ಚರಂಡಿ ಕಾಮಗಾರಿ ಕಳಪೆಯಾಗಿ ನಡೆಯುತ್ತಿದೆ ಎಂಬ ಗ್ರಾಮಸ್ಥರ ಆರೋಪದ ಮೇರೆಗೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸ್ಥಳಕ್ಕೆ ಭೇಟಿ ನೀಡಿದರು.

ಚರಂಡಿ ನಿರ್ವಿುಸಲು ಗ್ರಾಮದಲ್ಲಿದ್ದ ಸೈಜ್ ಕಲ್ಲಿನ ಉತ್ತಮ ಚರಂಡಿ ಕಿತ್ತು ಹಾಕಿದ್ದಾರೆ. ಸ್ಥಳೀಯ ಗ್ರಾಪಂ ಪಿಡಿಒ, ತಾಪಂ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಇಂಜಿನಿಯರ್​ಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

ಸಿಮೆಂಟ್ ಚರಂಡಿ ನಿರ್ವಣಕ್ಕೆ ಎಂ-ಸ್ಯಾಂಡ್ ಎಂದು ಜಲ್ಲಿ ಕ್ರಷರ್ ಮಿಷನ್ ಡಸ್ಟ್ ಬಳಕೆ ಮಾಡುತ್ತಿದ್ದಾರೆ. ರಸ್ತೆಗಳ ಒತ್ತುವರಿ ತೆರವು ಮಾಡದೆ ಚರಂಡಿ ನಿರ್ಮಾಣ ಮಾಡಿ ರಸ್ತೆಗಳನ್ನು ಕಿರಿದಾಗಿಸಿದ್ದಾರೆ. ಲಕ್ಷಾಂತರ ರೂ. ಮೌಲ್ಯದ ಸೈಜ್ ಕಲ್ಲನ್ನು ಗ್ರಾಪಂನವರು ಟೆಂಡರ್ ಪ್ರಕ್ರಿಯೆಯಲ್ಲಿ ಮಾರಾಟ ಮಾಡುವ ಬದಲು ನೇರವಾಗಿ ಮಾರಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಮಾಜಿ ಸಚಿವ ರೇಣುಕಾಚಾರ್ಯ ಸ್ಥಳ ಪರಿಶೀಲಿಸಿ, ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದರು. ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳು ಕೂಡಲೇ ಈ ಕಾಮಗಾರಿ ಕ್ರಿಯಾಯೋಜನೆ ರದ್ದುಗೊಳಿಸಿ, ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕಾಗಿ ಒತ್ತಾಯಿಸಿದರು.

ಗ್ರಾಪಂ ಸದಸ್ಯ ಶುಂಠಿ ಕರಿಬಸಪ್ಪ , ಮಾಜಿ ಸದಸ್ಯ ನಾಗೇಶ್ ನಾಡಿಗ್, ಮುಖಂಡರಾದ ಬೀಡಾ ರಮೇಶ್, ಕೋಟೆ ಮಂಜಪ್ಪ, ಜೆರಾಕ್ಸ್ ರಾಕೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net