ಸರ್ಕಾರದಲ್ಲಿ ಐಎಎಸ್​ ಅಧಿಕಾರಿಗಳದ್ದೇ ದೊಡ್ಡ ಲಾಬಿ: ರೇಣುಕಾಚಾರ್ಯ ಆಕ್ರೋಶ

renukacharya
Published on

ಹೊನ್ನಾಳಿ: ಸರ್ಕಾರದಲ್ಲಿ ಐಎಎಸ್​ ಅಧಿಕಾರಿಗಳದ್ದೇ ಒಂದು ದೊಡ್ಡ ಲಾಬಿ ಇದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ಹೊನ್ನಾಳಿಯಲ್ಲಿ ಶನಿವಾರ ರಾಜ್ಯದಲ್ಲಿ ಏಕರೂಪದ ಪಿಂಚಣಿ ವ್ಯವಸ್ಥೆ ಜಾರಿಗೆ ಒತ್ತಾಯಿಸಿ ಸರ್ಕಾರಿ ಎನ್​ಪಿಎಸ್​ ನೌಕರರ ಸಂಘವು ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದ ರೇಣುಕಾಚಾರ್ಯ, ಇಲಾಖೆಗಳಲ್ಲಿ ಐಎಎಸ್​ ಅಧಿಕಾರಿಗಳು ತಮಗೆ ಬೇಕಾದಂತೆ ವರ್ತಿಸುತ್ತಿದ್ದಾರೆ. ತಮಗೆ ಅಗತ್ಯವಿರುವ ಎಲ್ಲ ಸರ್ಕಾರಿ ಸೌಲಭ್ಯವನ್ನೂ ತಾವೇ ಮಂಜೂರು ಮಾಡಿಕೊಳ್ಳುತ್ತಾರೆ. ತಮ್ಮ ಅಧೀನ ಸರ್ಕಾರಿ ನೌಕರರ ಜೀವನವೂ ನಮ್ಮಂತೆಯೇ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಹೋರಾಟ ಮಾಡುತ್ತೇನೆ: ನೂತನ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ನೀವು ಹೋರಾಟ ಮುನ್ನಡೆಸಿ, ನಾನು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದು ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಹೋರಾಟ ಮಾಡುತ್ತೇನೆ. ಇದು ನನ್ನ ಕರ್ತವ್ಯ. ನೀವು ಎದೆಗುಂದಬೇಡಿ ಎಂದು ನಿವೃತ್ತ ನೌಕರರಿಗೆ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net