ಮೃತರ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರಕ್ಕೆ ರೇಣುಕಾಚಾರ್ಯ ಆಗ್ರಹ

m.p.renukacharya visit manjunath rao home
ವಿಜಯನಗರದ ಮಂಜುನಾಥ ರಾವ್ ಮನೆಗೆ ಮಾಜಿ ಸಚಿವ ರೇಣುಕಾಚಾರ್ಯ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು.
Published on

ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್‌ನ ಉಗ್ರರ ದಾಳಿಗೆ ಮೃತಪಟ್ಟ ಕರ್ನಾಟಕದ ಮೂವರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು.

ಸೋಮವಾರ ಮಧ್ಯಾಹ್ನ ಮಂಜುನಾಥ ರಾವ್ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಹತ್ತು ಲಕ್ಷ ರೂ. ಘೋಷಿಸಿದೆ. ಅದು ಸಾಲುವುದಿಲ್ಲ. ನಾಲ್ಕು ಲಕ್ಷ ಕೋಟಿ ರೂ. ಬಜೆಟ್ ಅಂತೀರಾ ಒಂದು ಕೋಟಿ ರೂ. ಕೋಡೊಕೆ ಆಗಲ್ವ ಎಂದು ಪ್ರಶ್ನಿಸಿದರು.

ಮೃತರ ಕುಟುಂಬಸ್ಥರು ಪರಿಹಾರಕ್ಕೆ ಕಾಯುತ್ತಿಲ್ಲ. ಆದರೆ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಅಗುತ್ತದೆ. ಹೋದ ಜೀವ ವಾಪಸ್ ಬರಲ್ಲ. ಪರಿಹಾರ ಕೊಡಿ ಎಂದು ಒತ್ತಾಯಿಸಿದರು. ಮಂಜುನಾಥ ರಾವ್ ಅವರ ಪುತ್ರನ ಶಿಕ್ಷಣಕ್ಕೆ ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net