ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ

IMG_20240322_210705_197.jpg
Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನ ಆವರಣದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ಶ್ರೀರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು.

ಶ್ರೀಜಗದ್ಗುರು ರಂಭಾಪುರೀಶ ಸಾಂಸತಿಕ ಸೇವಾ ಸಂಘದ ವತಿಯಿಂದ ವಿವಿಧ ಸೇವಾ ಕಾರ್ಯ ನಡೆಸಲಾಯಿತು. ದೇವಸ್ಥಾನದಲ್ಲಿ ರುದ್ರಾಭಿಷೇಕ, ಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು.

ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ನೆರೆಯ ತೆಲಂಗಾಣ ರಾಜ್ಯದ ಕೊಲ್ಲಿಪಾಕಿ ಮಹಾಕ್ಷೇತ್ರದ ಸ್ವಯಂಭು ಸೋಮೇಶ್ವರ ಮಹಾಲಿಂಗದಿಂದ ಆವಿರ್ಭವಿಸಿ ಸಮಾಜದ ಸರ್ವಜನಾಂಗದ ಹಿತಕ್ಕಾಗಿ 18 ಮಠಗಳನ್ನು ಸ್ಥಾಪಿಸಿ ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಮಲಯಾಚಲ ಗಿರಿಶ್ರೇಣಿಯಲ್ಲಿ ಆಶ್ರಮವಾಸಿಯಾಗಿದ್ದ ಮಹಾಮುನಿ ಅಗಸ್ತ್ಯರನ್ನು ನಿಮಿತ್ತ ಮಾಡಿಕೊಂಡು ಜಗತ್ತಿನ ಸಮಸ್ತ ಮನುಕುಲದ ಉದ್ಧಾರಕ್ಕಾಗಿ ಶಿವಾದ್ವೆತ ಸಿದ್ಧಾಂತವನ್ನು ಬೋಧಿಸಿದ್ದಾರೆ. ಶ್ರೀ ಶಿವಯೋಗಿ ಶಿವಾಚಾರ್ಯರು ರೇಣುಕಾಗಸ್ತ ಸಂವಾದ ರೂಪದಲ್ಲಿ ರಚಿಸಿರುವ ಶ್ರೀ ಸಿದ್ಧಾಂತ ಶಿಖಾಮಣಿಯು ವೀರಶೈವ ಧರ್ಮಗ್ರಂಥವೆಂದು ಮಾನ್ಯವಾಗಿದೆ ಎಂದರು.

ಜಗದ್ಗುರು ರೇಣುಕಾಚಾರ್ಯರು ಸಂಸ್ಥಾಪಿಸಿದ ವೀರಸಿಂಹಾಸನ ಮಹಾಪೀಠವೇ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿರುವ ಶ್ರೀಮದ್ರಂಭಾಪುರಿ ಪೀಠ ಎಂದು ಹೇಳಿದರು.

ಆರ್.ಎಂ ಹಿರೇಮಠ, ಎಫ್.ಆರ್. ಕರವೀರಮಠ, ಡಾ. ಎಸ್.ವಿ ಹಿರೇಮಠ, ವಿ.ಜಿ. ಪಾಟೀಲ, ಜಿ.ವಿ. ಹಿರೇಮಠ, ಪಂಚಲಿಂಗಪ್ಪ ಕವಲೂರ, ಶಿವಾನಂದ ಬೆಂಗೇರಿ, ರಾಮನಗೌಡ್ರ, ಎಂ.ಡಿ. ಜಾಧವ, ಶಿವಾನಂದ ಮಸಿಹಂಚಿನಾಳ, ಎಸ್.ಆರ್. ಅಂಗಡಿ, ಜಗದ್ಗುರು ರೇಣುಕಾಚಾರ್ಯ ಸೊಸೈಟಿ ನಿರ್ದೇಶಕರು, ಸಾಂಸತಿಕ ಸಂಘದ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net