ರೇಣುಕಾ ಯಲ್ಲಮ್ಮದೇವಿ ನಾಟಕ ಪ್ರದರ್ಶನ

Renuka Yallammadevi drama performance
ಲೋಕಾಪುರ ಸಮೀಪದ ಚೌಡಾಪುರದಲ್ಲಿ ಶ್ರೀ ರೇಣುಕಾ ಯಲ್ಲಮ್ಮ ಬಯಲಾಟ ನಡೆಯಿತು.
Published on

ಲೋಕಾಪುರ: ಸಮೀಪದ ಚೌಡಾಪೂರ ಗ್ರಾಮದ ಎಸ್.ಸಿ. ಕಾಲನಿಯಲ್ಲಿ ಬಾಗಲಕೋಟೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹೆಬ್ಬಾಳದ ನ್ಯೂ ಆಂಜನೇಯ ವಿವಿಧ ಕಲಾ ಮತ್ತು ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಶ್ರೀ ಮರಗಮ್ಮದೇವಿ ಉಡಿ ತುಂಬುವ ಕಾರ್ಯಕ್ರಮ ನಿಮಿತ್ತ ‘ಶ್ರೀ ರೇಣುಕಾ ಯಲ್ಲಮ್ಮ ದೇವಿ’ ಬಯಲಾಟ ಪ್ರದರ್ಶನಗೊಂಡಿತು.

ಕಲಾವಿದರಾದ ಗಂಗೂಬಾಯಿ ಮುಧೋಳ, ಯಮನಪ್ಪ ಸಾಲಹಳ್ಳಿ, ನಿಂಗಪ್ಪ ತೆಗ್ಗಿ, ಪರಸಪ್ಪ ಚಿಕ್ಕೂರ, ಚಿದಾನಂದ ಹಲಗಲಿ, ಕುಮಾರಿ ಜ್ಯೋತಿ ಮುಧೋಳ, ಯಲ್ವವ್ವ ಜುನ್ನಪ್ಪನವರ ಪಾತ್ರದಲ್ಲಿ ಕಾಣಿಸಿಕೊಂಡು ಗಮನಸೆಳೆದರು.

ಚೌಡಾಪೂರದ ಹಿರಿಯರಾದ ರಾಮಣ್ಣ ದೊಡಮನಿ, ಹನುಮಂತ ಮಾದರ, ಪುಂಡಲೀಕ ದೊಡಮನಿ, ಸೆಟ್ಟೆವ್ವ ದೊಡಮನಿ, ಕಲ್ಲವ್ವ ದೊಡಮನಿ, ಚೌಡಾಪೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net