ಲೋಕಕಲ್ಯಾಣಕ್ಕಾಗಿ ಮಠಾಧೀಶರ ಪ್ರಾರ್ಥನೆ

18 CHN 2
Published on

ಚನ್ನಗಿರಿ: ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಗೌರವ ಅಧ್ಯಕ್ಷರು, ತಾವರೆಕೆರೆ ಶಿಲಾಮಠ ಹಾಗೂ ಎಡೆಯೂರು ಕ್ಷೇತ್ರದ ಶೀ ರೇಣುಕಾ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ನಾಡಿನ ವಿವಿಧ ಮಠಾಧೀಶರು ಹಾಗೂ ಭಕ್ತರು ಪ್ರಯಾಗ್​ರಾಜ್​ಗೆ ತೆರಳಿ ಭಾನುವಾರ ಸಂಜೆ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.

ಪುಣ್ಯಸ್ನಾನದ ನಂತರ ಕಾಶಿ ಜಂಗಮವಾಡಿ ಮಠಕ್ಕೆ ಭೇಟಿ ನೀಡಿ ಕಾಶಿ ಜಗದ್ಗುರುಗಳ ದರ್ಶನ ಮತ್ತು ಆಶೀರ್ವಾದ ಪಡೆಯಲಾಯಿತು ಎಂದು ತಾಲೂಕಿನ ತಾವರೆಕೆರೆ ಶಿಲಾಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಶ್ರೀಗಳು ತಿಳಿಸಿದರು.

ಪ್ರಯಾಗ್​ರಾಜ್​ನ ಜಂಗಮವಾಡಿ ಮಠದಲ್ಲಿ ತಾವರೆಕೆರೆ ಶಿಲಾಮಠದ ವತಿಯಿಂದ 15ಲಕ್ಷ ರೂ. ವೆಚ್ಚದಲ್ಲಿ ವಿಶ್ರಾಂತಿ ಗೃಹ ನಿರ್ವಿುಸಲಾಗಿದೆ. ಎಡೆಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯ ಶ್ರೀಗಳು ಭಾನುವಾರ ಅದರ ಉದ್ಘಾಟನೆ ನೆರವೇರಿಸಿದರು.

ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಶ್ರೀ, ಲಿಂಗದಹಳ್ಳಿಯ ಪಶುಪತಿ ಶಿವಾನಂದ ಶಿವಾಚಾರ್ಯರು, ಬಿರೂರು ಮಠದ ರುದ್ರಮುನಿ ಶಿವಚಾರ್ಯ ಶ್ರೀ, ಹಾರನಹಳ್ಳಿಯ ಶಿವಯೋಗಿ ಶಿವಾಚಾರ್ಯ ಶ್ರೀ, ತಾವರೆಕೆರೆ ಶಿಲಾಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಶ್ರೀ, ದೊಡ್ಡಮೇಟಿ ಕುರ್ಕಿ ಶಶಿಶೇಖರ ಬಸವ ಶ್ರೀ, ನಾಗಪುರದ ತೇಜಸ್ ಲಿಂಗ ಸ್ವಾಮಿಗಳು, ಹಿರೇಮಠದ ಶ್ರೀ ಗುರುಪ್ರಸಾದ ದೇವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net