

ಮುಗಳಖೋಡ: ಪಟ್ಟಣದ ರೇಣುಕಾದೇವಿ ಜಾತ್ರಾ ಮಹೋತ್ಸವ ನ.4ರಿಂದ 5ರ ವರೆಗೆ ಜರುಗಲಿದೆ. ಶ್ರೀ ಯಲ್ಲಾಲಿಂಗ ಪ್ರಭು ಮಹಾರಾಜರ ಬ್ರಹನ್ಮಠದ ಪೀಠಧಿಪತಿ ಡಾ.ಮುರಾರಾಜೇಂದ್ರ ಸ್ವಾಮೀಜಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡುವರು. ರಾತ್ರಿ 9ಕ್ಕೆ ಡೊಳ್ಳಿನ ಪದ ಹಾಗೂ ಚೌಡಕಿ ಪದಗಳು ಜರುಗುವವು. ನ.5ರಂದು ಬೆಳಗ್ಗೆ 6 ಗಂಟೆಗೆ ದೇವಿಗೆ ಮಹಾಭಿಷೇಕ, 9ಕ್ಕೆ ಸಕಲ ವಾದ್ಯದೊಂದಿಗೆ ದೇವಿಯ ಮೆರವಣಿಗೆ, ಮಧ್ಯಾಹ್ನ 12 ಗಂಟೆಗೆ ಹಡ್ಲಗಿ ತುಂಬುವುದು ನಂತರ ಮಹಾಪ್ರಸಾದ ಜರುಗುವುದು. ರಾತ್ರಿ 10 ಗಂಟೆಗೆ ಶ್ರೀರೇಣುಕಾದೇವಿ ಮಹಾತ್ಮೆ ಭಕ್ತಿ ಪ್ರದಾನ ನಾಟಕ ಜರುಗುವುದು. ಸಕಲ ಭಕ್ತರು ಜಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆ ತಿಳಿಸಿದೆ.