

ಬೆಳಗಾವಿ: ವಿಜಯಪುರ ಜಿಲ್ಲೆಯ ಜಂಬಗಿಯ ಪ್ರಭುದೇವರ ಬೆಟ್ಟದ ಶಿವಯೋಗೀಶ್ವರ ಮಹಾರಾಜರ ಸಂಕಲ್ಪದಂತೆ ರಾಯಚೂರು ಜಿಲ್ಲೆಯ ವೀರಟ್ಟದ ಅಡವಿಲಿಂಗ ಮಹಾರಾಜರು 4.5 ಲ ರೂ.ವೆಚ್ಚದಲ್ಲಿ ಸಿದ್ಧಪಡಿಸಿದ ರೇಷ್ಮೆ ಸೀರೆಯನ್ನು ಯಲ್ಲಮ್ಮನ ಗುಡ್ಡದ ಶ್ರೀ ರೇಣುಕಾದೇವಿಗೆ ಗುರುವಾರ ಅರ್ಪಿಸಿದರು.ವೀರಟ್ಟದ ಅಡವಿಲಿಂಗ ಮಹಾರಾಜರು, ವಿವೇಕ ಚಿಂತಾಮಣಿ ಸ್ವಾಮೀಜಿ, ಬಾಬುರಾಯಗೌಡ ಬಿರಾದಾರ, ಕಲಾವತಿ ಬಿರಾದಾರ, ಜ್ಞಾನಸಿಂಧು ಸ್ವಾಮೀಜಿ,ಬಯಲು ಬಸವೇಶ್ವರ ಸ್ವಾಮೀಜಿ, ಸಿ.ಎನ್.ಕುಲಕರ್ಣಿ, ಆರ್.ಎಚ್.ಸವದತ್ತಿ, ಗಡ್ಡಯ್ಯ ಋಷಿಗಳು, ಅಲ್ಲಮಪ್ರಭು ಪ್ರಭುನವರ, ಜಿ.ಸಿ.ಕಗದಾಳ, ಎನ್.ಎಸ್.ಸಬರದ ಇತರರಿದ್ದರು.