ಹಸಿರುಕ್ರಾಂತಿಯ ಮೂಲ ರೇಣುಕಾ ಭಗವತ್ಪಾದರು

14 ckm 2
ಚಿಕ್ಕಮಗಳೂರಿನ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯಭವನದ ಆವರಣದಲ್ಲಿ ಮಾಧ್ಯಮಸಂಸ್ಕೃತಿ ಪ್ರತಿಷ್ಠಾನ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಹಸಿರು ಕಾರ್ಯಕ್ರಮದಲ್ಲಿ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಜಗದ್ಗುರುಗಳು ಭಕ್ತರಿಗೆ ವಿವಿಧ ಸಸಿಗಳನ್ನು ವಿತರಿಸಿದರು.
Published on

ಚಿಕ್ಕಮಗಳೂರು: ಪೃಥ್ವಿಯ ಹಸಿರುಕ್ರಾಂತಿ ಮೂಲ ರೇಣುಕಾ ಭಗವತ್ಪಾದರು ಎಂದು ಬಾಳೆಹೊನ್ನೂರಿನ ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಪ್ರತಿಪಾದಿಸಿದರು.

ಮಾಧ್ಯಮಸಂಸ್ಕೃತಿ ಪ್ರತಿಷ್ಠಾನ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ನಗರದ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯಭವನದ ಆವರಣದಲ್ಲಿ ಆಯೋಜಿಸಿದ್ದ ಹಸಿರು ಕಾರ್ಯಕ್ರಮದಲ್ಲಿ ಪನ್ನೇರಳೆ, ಹಲಸು, ಮಾವಿನ ಹಣ್ಣಿನ ಸಸಿಗಳನ್ನು ಸಾರ್ವಜನಿಕರಿಗೆ ಅವರು ವಿತರಿಸಿದರು.
ಯುಗದ ಆದಿಯಲ್ಲಿ ಆವಿರ್ಭವಿಸಿದ ಶ್ರೀಜಗದ್ಗುರು ರೇಣುಕಾಚಾರ್ಯರು ಮನುಕುಲಕ್ಕೆ ಉತ್ತುವ-ಬಿತ್ತುವ, ಉಣ್ಣುವ-ಉಡುವ ಸಂಸ್ಕೃತಿಯನ್ನು ಕಲಿಸಿದವರು. ಗೆಡ್ಡೆಗೆಣಸು ಹಸಿಯಾಗಿ ತಿಂದು ಹಸಿವು ಇಂಗಿಸಿಕೊಳ್ಳುತ್ತಿದ್ದ ಕಾಲಘಟ್ಟದಲ್ಲೆ ಕೃಷಿ ಸಂಸ್ಕೃತಿಯನ್ನು ಕಲಿಸಿಕೊಟ್ಟವರು. ನಾಗರಿಕ ಬದುಕಿಗೆ ಅಂಕುರಾರ್ಪಣೆ ಮಾಡಿದವರು. ಇಂದಿನ ಆಂಧ್ರಪ್ರದೇಶ ಕೊಲ್ಯನುಪಾಕಿ ಶ್ರೀಸೋಮೇಶ್ವರ ಲಿಂಗದಲ್ಲಿ ಆವಿರ್ಭವಿಸಿ ಮನುಕುಲಕ್ಕೆ ಬಾಳಿಬದುಕುವ ಮಾರ್ಗದರ್ಶನ ಮಾಡಿದ ಮೂಲ ಪುರುಷರು ಎಂದರು.
ಶAಕರದೇವರಮಠದ ಶ್ರೀಚಂದ್ರಶೇಖರ ಶಿವಾಚಾರ್ಯರು ಮತ್ತು ಬೇರಗಂಡಿಮಠದ ಶ್ರೀರೇಣುಕಾಮಹಾಂತ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಧ್ಯಮ ಸಂಸ್ಕೃತಿ ಪ್ರತಿಷ್ಟಾನದ ಅಧ್ಯಕ್ಷ ಪ್ರಭುಲಿಂಗಶಾಸ್ತಿç ವಹಿಸಿದ್ದರು. ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಪ್ರತಿಷ್ಠಾನದ ಗೌರವಾಧ್ಯಕ್ಷ ಎ.ಬಿ.ಸುದರ್ಶನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net