ಬಾಡಿಗೆ ಕಟ್ಟದ 11 ಮಳಿಗೆಗಳಿಗೆ ಬೀಗ

Sirigeri Shops Lock
ಸಿರಿಗೇರಿಯಲ್ಲಿ ಬಾಡಿಗೆ ಕಟ್ಟದ ವಾಣಿಜ್ಯ ಮಳಿಗೆಗಳಿಗೆ ಗ್ರಾಪಂನಿಂದ ಗುರುವಾರ ಬೀಗ ಹಾಕಲಾಯಿತು. ಪಿಡಿಒ ರಾಮಪ್ಪ, ಕಾರ್ಯದರ್ಶಿ ವೀರೇಶ್ ಗೌಡ, ಪ್ರಮುಖರಾದ ಕೆ.ದ್ಯಾವಣ್ಣ, ಗುಡಟ್ಟಿ ಈರಣ್ಣ, ಭಜಂತ್ರಿ ರಮೇಶ, ಎಸ್.ಎಂ.ಅಡಿವೆಯ್ಯ ಸ್ವಾಮಿ ಇತರರಿದ್ದರು.
Published on

ಸಿರಿಗೇರಿ: ಇಲ್ಲಿನ ಗ್ರಾಪಂಗೆ ಒಳಪಡುವ 41 ವಾಣಿಜ್ಯ ಮಳಿಗೆಗಳ ಪೈಕಿ 11 ಅಂಗಡಿ ಬಾಡಿಗೆದಾರರು ನಾಲ್ಕೈದು ವರ್ಷದಿಂದ ಬಾಡಿಗೆ ಕಟ್ಟದ ಹಿನ್ನೆಲೆಯಲ್ಲಿ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸದಸ್ಯರು ಗುರುವಾರ ಪೊಲೀಸ್ ಭದ್ರತೆಯೊಂದಿಗೆ ಮಳಿಗೆಗಳಿಗೆ ಬೀಗ ಹಾಕಿದರು.

ಪಿಡಿಒ ಉಪ್ಪಾರ್ ರಾಮಪ್ಪ ಮಾತನಾಡಿ, 11 ವಾಣಿಜ್ಯ ಮಳಿಗೆ ಮಾಲೀಕರು ನಾಲ್ಕೈದು ವರ್ಷಗಳಿಂದ ಬಾಡಿಗೆ ಪಾವತಿಸಿಲ್ಲ. 40 ರಿಂದ 50 ಸಾವಿರ ರೂ. ಬಾಡಿಕೆ ಕಟ್ಟಬೇಕಿದೆ. ಇದರಿಂದ ಗ್ರಾಪಂ ಸಿಬ್ಬಂದಿ ವೇತನ, ಇತರ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ. ಬಾಡಿಗೆ ಕಟ್ಟಲು ಮೂರ‌್ನಾಲ್ಕು ಸಲ ನೋಟಿಸ್ ನೀಡಲಾಗಿತ್ತು. ಆದರೆ, ಯಾವುದೇ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ಬೀಗ ಹಾಕಲಾಗಿದೆ.

ಕೆಲ ವಾಣಿಜ್ಯ ಮಳಿಗೆದಾರರು ಸತ್ತವರ ಹೆಸರಲ್ಲಿ ಬಾಡಿಗೆ ಮುಂದುವರಿಸಿರುವುದು ಗಮನಕ್ಕೆ ಬಂದಿದ್ದು, ಅಂತಹ ಮಳಿಗೆಗಳನ್ನು ರದ್ದು ಮಾಡಿ ಹೊಸದಾಗಿ ಟೆಂಡರ್ ಕರೆದು ಎಸ್ಸಿ-ಎಸ್ಟಿ ವ್ಯಾಪಾರಸ್ಥರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಪ್ರಮುಖರಾದ ಕೆ.ದ್ಯಾವಣ್ಣ, ಗುಡಟ್ಟಿ ಈರಣ್ಣ, ಭಜಂತ್ರಿ ರಮೇಶ, ಎಸ್.ಎಂ.ಅಡಿವೆಯ್ಯ ಸ್ವಾಮಿ, ವಿ.ಶೇಖರ್, ಡ್ರೈವರ್ ಹುಲುಗಪ್ಪ, ಬಿ.ಉಮೇಶ್, ಲಕ್ಷ್ಮಣ ಭಂಡಾರಿ, ಸದ್ದಾಂ, ಸಲೀಂ, ಹಳ್ಳಿಮರದ ನಾಗರಾಜ್, ಎನ್.ಹನುಮಂತ, ವಿ.ಮುದಿಯಪ್ಪ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net