

ಹಾರೂಗೇರಿ: ಲಿಂಗ ಪೂಜೆಯೊಂದಿಗೆ ಶರಣ ತತ್ತ್ವಗಳನ್ನು ಸಮಾಜಕ್ಕೆ ಮುಟ್ಟಿಸುವ ಕಾಯಕದಲ್ಲಿ ತೊಡಗಿಕೊಂಡ ಸಜ್ಜನ ಸಂಗಪ್ಪ ಬಾಡಗಿ ಗುರುಗಳ ಸೇವೆ ಅನನ್ಯ ಎಂದು ಶೇಗುಣಸಿಯ ವಿರಕ್ತಮಠದ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಜೈನ ಸಮುದಾಯ ಭವನದಲ್ಲಿ ಶರಣ ವಿಚಾರ ವಾಹಿನಿ ಹಾರೂಗೇರಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಎಸ್.ಎಲ್.ಬಾಡಗಿ ಗುರುಗಳ ಅಮೃತ ಮಹೋತ್ಸವ ಹಾಗೂ ಬಾಳಸಂಗಮ ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್.ಮಠಪತಿ, ಬಾಗಲಕೋಟ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸದಾಶಿವ ಬಡಿಗೇರ, ಸಾಹಿತಿ ಡಾ.ವಿ.ಎಸ್.ಮಾಳಿ, ಹಂದಿಗುಂದ ಆಡಿಮಠದ ಶಿವಾನಂದ ಸ್ವಾಮೀಜಿ ಮಾತನಾಡಿದರು. ತೆರೆದ ವಾಹನದಲ್ಲಿ ಎಸ್.ಎಲ್.ಬಾಡಗಿ ಗುರುಗಳನ್ನು ಮೆರವಣಿಗೆ ಮಾಡಲಾಯಿತು.
ಎಸ್.ಎಲ್.ಬಾಡಗಿ ಗುರುಗಳ ಕುರಿತು ರಚಿತವಾದ ಬಾಳಸಂಗಮ ಅಭಿನಂದನಾ ಗ್ರಂಥವನ್ನು ಸ್ವಾಮೀಜಿಗಳು ಲೋಕಾರ್ಪಣೆಗೊಳಿದರು. ಎಸ್.ಎಲ್.ಬಾಡಗಿ ದಂಪತಿ ಪಾದಪೂಜೆ ಜರುಗಿತು. ನದಿ ಇಂಗಳಗಾವದ ಸಿದ್ಧಲಿಂಗ ಸ್ವಾಮೀಜಿ, ಬಾಲ್ಕಿ ಹಿರೇಮಠದ ಬಸವಲಿಂಗ ಪಟ್ಟಾಧ್ಯಕ್ಷ, ರಾಜಶೇಖರ ಪಾಟೀಲ, ಡಿ.ಸಿ.ಸದಲಗಿ, ಎನ್.ಎಸ್.ಚೌಗಲಾ, ಅಪ್ಪಾಸಾಹೇಬ ಕುಲಕರ್ಣಿ, ಶಿವಗೊಂಡ ಧರ್ಮಟ್ಟಿ, ಮಾಜಿ ಶಾಸಕ ಬಿ.ಸಿ.ಸರಿಕರ, ಪರಮೇಶ್ವರ ಬಾಡಗಿ, ವಿಠ್ಠಲ ಜೋಡಟ್ಟಿ, ವೀರೇಶ ಪಾಟೀಲ, ಹನುಮಂತ ಯಲಶೆಟ್ಟಿ ಇತರರಿದ್ದರು.