ಕಾರು ಬಾಡಿಗೆಗೆ ಪಡೆದು ಮಾರಾಟ

Fruad
Published on

ಮಂಗಳೂರು: ನಗರದ ಫಳ್ನೀರ್‌ನಲ್ಲಿರುವ ಸಂಸ್ಥೆಯೊಂದರಿಂದ ಬಾಡಿಗೆ ಕಾರು ಪಡೆದು ಅದನ್ನು ಮಾರಾಟ ಮಾಡಿದ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬಂಟ್ವಾಳದ ಯಕ್ಷಿತ್ ಎಂಬಾತ ಕಿಸ್ಟಾ ಕಾರನ್ನು ಆನ್‌ಲೈನ್ ಮೂಲಕ ಕಾಯ್ದಿರಿಸಿ 25 ಸಾವಿರ ರೂ. ಆನ್‌ಲೈನ್ ಮೂಲಕ ಪಾವತಿಸಿ, ನಂತರ ಬಾಕಿ ಇರುವ 50 ಸಾವಿರ ರೂ. ನಗದಾಗಿ ನೀಡಿ, ಅದರೊಂದಿಗೆ ಆಧಾರ್ ಕಾರ್ಡ್, ಚಾಲನಾ ಪರವಾನಗಿ ಮತ್ತು 3 ಬ್ಯಾಂಕ್ ಚೆಕ್‌ನ್ನು ನೀಡಿ, 15 ದಿನಗಳಿಗೆ ಬಾಡಿಗೆಗೆ ತೆಗೆದುಕೊಂಡು ಹೋಗಿದ್ದರು. ನಂತರ ಬುಕ್ಕಿಂಗ್ ಅವಧಿ ಮುಗಿದಿದ್ದರೂ ಕೂಡಾ ಕಾರನ್ನು ಹಿಂತಿರುಗಿ ನೀಡದೆ ಇರುವುದರಿಂದ ಸಂಸ್ಥೆಯ ಮಾಲೀಕ ಮೊಹಮ್ಮದ್ ಹುಸೈನಾರ್ ಅವರು ಕರೆ ಮಾಡಿದಾಗ ಕರೆಗೆ ಸ್ಪಂದಿಸಿಲ್ಲ. ಜಿಪಿಎಸ್ ಮೂಲಕ ಪರಿಶೀಲಿಸಿದಾಗ ಕಾರು ವಿಜಯಪುರದಲ್ಲಿರುವುದು ಕಂಡು ಬಂದಿದೆ. ಕಾರನ್ನು ಯಕ್ಷಿತ್ ಮತ್ತು ಹರೀಶ್ ಎಂಬವರು ಆಧಾರ್ ಕಾರ್ಡನ್ನು ನಕಲು ಮಾಡಿ ವಿಜಯಪುರದ ವ್ಯಕ್ತಿಗೆ ಮಾರಾಟ ಒಪ್ಪಂದ ಮಾಡಿ 7 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net