ಜೀರ್ಣೋದ್ಧಾರ ವಿಜ್ಞಾಪನಾ ಪತ್ರ ಬಿಡುಗಡೆ

New Project (5)
Published on

ಕಾಸರಗೋಡು: ನಾಗರಕಟ್ಟೆ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಅವರಿಂದ 1930ರಲ್ಲಿ ಸ್ಥಾಪಿಸಲಾದ ಶ್ರೀ ಶಾರದಾ ಭಜನಾಶ್ರಮದ ಸಮಗ್ರ ಜೀರ್ಣೋದ್ಧಾರ ನೂತನ ನಾಗನ ಕಟ್ಟೆ, ಅಪೂರ್ಣ ಸಭಾಭವನ ಪೂರ್ಣಗೋಳಿಸುವಿಕೆ ಹಾಗೂ ಬ್ರಹ್ಮಕಲಶೋತ್ಸವ ನಡೆಸುವ ಕಾರ್ಯಕ್ರಮಗಳ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭ ನಾಗರಕಟ್ಟೆ ಶ್ರೀ ಶಾರದಾಂಬಾ ಸನ್ನಿಧಿಯಲ್ಲಿ ಜರುಗಿತು.

ಸಮಿತಿ ಅಧ್ಯಕ್ಷ ಲಕ್ಷ್ಮಣ ಬೀರಂತಬೈಲ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಅಧ್ಯಕ್ಷ ಲಕ್ಷ್ಮಣ ಬೀರಂತಬೈಲ್ ಕ್ಷೇತ್ರ ಅರ್ಚಕ ಗಣಪತಿ ಭಟ್ ಅವರಿಗೆ ವಿನಂತಿ ಪತ್ರ ನೀಡುವ ಮೂಲಕ ಬಿಡುಗಡೆಗೊಳಿಸಲಾಯಿತು.

ಸಮಿತಿ ಉಪಾಧ್ಯಕ್ಷರಾದ ವಾಮನ್ ರಾವ್ ಬೇಕಲ್, ರಮೇಶ್, ಪಾಂಡುರಂಗ ವಿದ್ಯಾನಗರ, ರಾಜ್ ಕುಮಾರ್, ನವೀನ್ ನಾಯ್ಕ, ಪ್ರಸಾದ್, ರಮಾನಂದ, ಉದಯ ಕುಮಾರ್ ಸಿ.ಎಸ್., ಪ್ರದೀಪ್ ನಾಯ್ಕ ಮೊದಲಾದವರಿದ್ದರು. ದಿನೇಶ್ ನಾಗರಕಟ್ಟೆ ಸ್ವಾಗತಿಸಿದರು. ಮೋಹನದಾಸ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net