

ಸವಣೂರ: ಕೇಂದ್ರ ಸರ್ಕಾರದ ಅನುದಾನದಲ್ಲಿ ಸವಣೂರ-ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ದೇವಸ್ಥಾನಗಳ ಜೀರ್ಣೋದ್ಧಾರ ಕೈಗೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಬಿಜೆಪಿ ಸವಣೂರ ಮಂಡಳ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ ತಿಳಿಸಿದರು.
ತಾಲೂಕಿನ ಮಂತ್ರೋಡಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಸಂಸದರ 10 ಲಕ್ಷ ರೂ.ಗಳ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಸಭಾಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಿತ್ಯ ಒಡನಾಟ, ರಾಷ್ಟ್ರ ಚಿಂತನೆಯೊಂದಿಗೆ ಗ್ರಾಮದ ಸಭಾಭವನ ನಿರ್ಮಾಣಕ್ಕೆ ಮುಂದಾಗಿರುವ ಸಂಸದ ಪ್ರಲ್ಹಾದ ಜೋಶಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಬಂಕಾಪೂರ ಕೆಂಡದಮಠದ ಸಿದ್ದಯ್ಯಸ್ವಾಮೀಜಿ ಹಾಗೂ ಮಂತ್ರೋಡಿ ಹಿರೇಮಠದ ಸಿದ್ರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು. ತಾಪಂ ಮಾಜಿ ಅಧ್ಯಕ್ಷ ಮಾಲತೇಶ ಬಿಜ್ಜೂರ, ಗ್ರಾಪಂ ಅಧ್ಯಕ್ಷೆ ಮಂಜುಳಾ ಕೋಳಿವಾಡ, ಉಪಾಧ್ಯಕ್ಷ ಸುರೇಶ ಹೊನ್ನಿಕೊಪ್ಪ, ಸದಸ್ಯರಾದ ಮಲ್ಲೇಶಪ್ಪ ಭಂಡಾರಿ, ಬಾಪುಗೌಡ ಕೊಪ್ಪದ, ಪ್ರಮುಖರಾದ ಅಶೋಕ ಯಲಿಗಾರ, ಬಸನಗೌಡ ಕೊಪ್ಪದ, ಟಿ.ಬಿ. ಪಾಟೀಲ, ಬಸನಗೌಡ ಪಾಟೀಲ, ಹನಮಂತಪ್ಪ ಬಂಕಾಪೂರ, ಯಲ್ಲಪ್ಪ ಆಡಿನ, ಹನಮಂತಪ್ಪ ನೆಲ್ಲೂರ, ನಿಂಗಪ್ಪ ಯಲವಿಗಿ, ನಿಂಗಪ್ಪ ನೆಲ್ಲೂರ, ಶಿವಪ್ಪ ಕಳಲಕೊಂಡ, ಸಿದ್ದಪ್ಪ ಬಡ್ನಿ, ಮಹಾಲಿಂಗಪ್ಪ ಪೂಜಾರ, ಯಲ್ಲಪ್ಪ ಕಾಳಪ್ಪನವರ, ಹನಮಂತಪ್ಪ ಹುಡೇದ, ಅಶೋಕ ನೆಲ್ಲೂರ, ತಿಪ್ಪಣ್ಣ ಪೂಜಾರ, ಶಿದ್ದಪ್ಪ ಕಳಲಕೊಂಡ, ಕರೆಯಪ್ಪ ಪೂಜಾರ, ಹುಲಗಪ್ಪ ಕಳ್ಳಿಮನಿ, ಮಾಲತೇಶ ಭಂಡಾರಿ, ಪರಶುರಾಮ ಹುಡೇದ, ಮೈಲಾರಪ್ಪ ಪೂಜಾರ, ಮಾದೇವಪ್ಪ ಕುರಿಗಾರ, ನೀಲಪ್ಪ ಹುಣಿಸಿಮರದ ಇತರರಿದ್ದರು. ಫಕೀರೇಶ ನೆಲ್ಲೂರ ಕಾರ್ಯಕ್ರಮ ನಿರ್ವಹಿಸಿದರು.