ಪಾಲಿಕೆಯ ನವೀಕೃತ ಸಭಾಭವನ ಉದ್ಘಾಟನೆ

hdmc hall
Published on

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಹುಬ್ಬಳ್ಳಿ ಕೇಂದ್ರ ಕಚೇರಿಯ ನವೀಕೃತ ಸಭಾಭವನವನ್ನು ಮೇಯರ್ ವೀಣಾ ಬರದ್ವಾಡ ಗುರುವಾರ ಉದ್ಘಾಟಿಸಿದರು.

ಉಪ ಮೇಯರ್ ಸತೀಸ ಹಾನಗಲ್, ಸದಸ್ಯರು, ಅಧಿಕಾರಿಗಳು ಇದ್ದರು. 46.30 ಲಕ್ಷ ರೂ. ವೆಚ್ಚದಲ್ಲಿ ಸಭಾಭವನವನ್ನು ನವೀಕರಿಸಲಾಗಿದೆ. ನವೀಕೃತ ಸಭಾಭವನದಲ್ಲಿ ಸಾರ್ವಜನಿಕ ಗ್ಯಾಲರಿಯೇ ಇಲ್ಲ. ಮಾಧ್ಯಮದವರಿಗೆ ಕೇವಲ 20-24 ಆಸನಗಳಿಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೇ ಸಾರ್ವಜನಿಕರು ನುಸುಳಿದ ಪರಿಣಾಮ ಅವ್ಯವಸ್ಥೆ ಉಂಟಾಗಿತ್ತು. ಕಳೆದ 1 ವರ್ಷದಿಂದ ಧಾರವಾಡದಲ್ಲಿ ಪಾಲಿಕೆಯ ಸಾಮಾನ್ಯ ಸಭೆಗಳು ನಡೆದಿದ್ದವು.

ಭೋಜನ ವಿರಾಮದ ವೇಳೆ ಸಭಾಭವನದಿಂದ ಟೇರೆಸ್​ಗೆ ತೆರಳುವ ಮೆಟ್ಟಿಲುಗಳಿಂದ ಜಾರಿ ಬಿದ್ದು ಪಾಲಿಕೆ ಸದಸ್ಯ ಮಯೂರ ಮೋರೆ ಅವರ ಆಪ್ತ ಸಹಾಯಕ ವೀರಣ್ಣ ಎಂಬುವವರು ಗಾಯಗೊಂಡ ಘಟನೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net