

ಇಂಡಿ: ಹೂಗಾರ ಅಭಿವೃದ್ಧಿ ನಿಗಮಕ್ಕೆ ಅನುದಾನ ಮೀಸಲಿಡುವುದರ ಜೊತೆಗೆ ನಿಗಮದ ಅಧ್ಯಕ್ಷರ ನೇಮಕಕ್ಕೆ ಸರ್ಕಾರ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಹೂಗಾರ ಸಮಾಜದವರು ಗ್ರೇಡ್-2 ತಹಸೀಲ್ದಾರ್ ಧನಪಾಲಶೆಟ್ಟಿ ದೇವೂರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಮಾಲಿ, ಮಾಲಗಾರ, ಹೂಗಾರ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿ ಸ್ಥಾಪಿಸಿ ನಿಗಮಕ್ಕೆ ಹೂಗಾರ ಮಾದಯ್ಯ ಅಭಿವೃದ್ಧಿ ನಿಗಮ ಎಂದು ಮರುನಾಮಕರಣ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮುಖಂಡರಾದ ಸೋಮಶೇಖರ ಹೂಗಾರ, ಮಹೇಶ ಹೂಗಾರ, ಸಿದ್ಧಲಿಂಗ ಪೂಜಾರಿ, ಶಂಕರ ಹೂಗಾರ, ಶ್ರೀಶೈಲ ಹೂಗಾರ, ಧರೆಪ್ಪ ಹೂಗಾರ, ಶಿವಯೊಗೆಪ್ಪ ಹೂಗಾರ, ಸಂತೋಷ ಹೂಗಾರ, ರವಿ ಹೂಗಾರ, ಪ್ರಶಾಂತ ಹೂಗಾರ, ಮಾಂತೇಶ ಹೂಗಾರ, ವೀರೇಶ ಹೂಗಾರ, ಶಾಂತಪ್ಪ ಪೂಜಾರಿ, ಗುರಪ್ಪ ಹೂಗಾರ ಇತರರಿದ್ದರು.