

ಹೊಳೆಹೊನ್ನೂರು: ಎಮ್ಮೆಹಟ್ಟಿ, ಅಗಸನಹಳ್ಳಿ, ಕೆರೆಬೀರನಹಳ್ಳಿ ಹಾಗೂ ಹೊಳೆಭೈರನಹಳ್ಳಿ ಗ್ರಾಮಗಳಿಗೆ ಭದ್ರಾ ನಾಲಾ ನೀರಿನ ಸಮಸ್ಯೆ ಪರಿಹಾರಕ್ಕೆ ಈ ಭಾಗದ ರೈತರು ಡಿ.ಬಿ.ಹಳ್ಳಿಯ ನೀರಾವರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಭದ್ರಾ ನಾಲಾ 19-20ರ ದುರಸ್ತಿ ಕಾರ್ಯ ಬಾಕಿ ಇದೆ. ಜತೆಗೆ ಕಾಲುವೆಯಲ್ಲಿ ಹೂಳು ತುಂಬಿ ನೀರು ಮುಂದೆ ಸಾಗಲು ಅಡ್ಡಿ ಆಗುತ್ತಿದೆ. ಇದರಿಂದ ಎಮ್ಮೆಹಟ್ಟಿ, ಅಗಸನಹಳ್ಳಿ, ಕೆರೆಬೀರನಹಳ್ಳಿ ಹಾಗೂ ಹೊಳೆಭೈರನಹಳ್ಳಿ ವ್ಯಾಪ್ತಿಯ ಜಮೀನುಗಳಿಗೆ ಸಮಪರ್ಕವಾಗಿ ನೀರು ಸರಬರಾಜು ಆಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ತಿಳಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಇನ್ನಾದರೂ ಈ ಕೂಡಲೆ ಸಮಸ್ಯೆ ಬಗೆ ಹರಿಸಬೇಕೆಂದು ಮನವಿ ಮಾಡಿದರು.
ಮುಖಂಡರಾದ ಯು.ಬಸವರಾಜ್, ರಾಕೇಶ್, ಅನಿಲ್, ಯಲ್ಲೋಜಿರಾವ್, ಪರಮೇಶ್ವರಪ್ಪ, ಶಿವಾಜಿ ರಾವ್, ರತ್ನಪ್ಪ, ಪರಸಪ್ಪ, ಮಂಜುನಾಥ್, ಹನುಮಂತಪ್ಪ, ಕೃಷ್ಣಪ್ಪ, ಯಲ್ಲಪ್ಪ, ಶಾಂತರಾಜ್, ಮೈಲಾರಿ ರಾವ್, ಪ್ರೇಮ್, ಶಿವಣ್ಣ, ರಾಜಪ್ಪ, ದೇವೋಜಿ ರಾವ್, ನಾಗರಾಜಪ್ಪ, ಮಧು, ತಿಪ್ಪೇಶ್ ರಾವ್ ಸೇರಿದಂತೆ ನೂರಾರು ರೈತರು ಇದ್ದರು.