ಮೂರ್ಕಣ್ ಗುಡ್ಡ ವ್ಯಾಪ್ತಿಯನ್ನು ಸೆಕ್ಷನ್4 ರಿಂದ ಕೈಬಿಡಿ

13 skp 1--
ಸೆಕ್ಷನ್ 4 ರಿಂದ ಮೂರ್ಕಣ್ ಗುಡ್ಡ ವ್ಯಾಪ್ತಿಯನ್ನು ಹೊರಗಿಡುವಂತೆ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ನೇತೃತ್ವದಲ್ಲಿ ಗ್ರಾಮಸ್ಥರು ಕೃಷ್ಣಬೈರೇಗೌಡ ಅವರಿಗೆ ಮನವಿ ಸಲ್ಲಿಸಿದರು.
Published on

ಸಕಲೇಶಪುರ: ಮೂರ್ಕಣ್ ಗುಡ್ಡ ವ್ಯಾಪ್ತಿಯನ್ನು ಸೆಕ್ಷನ್ 4 ರಿಂದ ಕೈಬಿಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ಮನವಿ ಸಲ್ಲಿಸಿದರು.

100 ವರ್ಷಗಳ ಹಿಂದೆ ಮೂರ್ಕಣ್ ಗುಡ್ಡ ವ್ಯಾಪ್ತಿಯನ್ನು ಅಭಯಾರಣ್ಯ ಮಾಡುವ ನಿಟ್ಟಿನಲ್ಲಿ ಅಂದಿನ ಮೈಸೂರು ಸರ್ಕಾರ 7900 ಎಕರೆ ಜಮೀನನ್ನು ಗುರುತಿಸಿದೆ. ಆದರೆ ಅಭಯಾರಣ್ಯ ಮಾಡುವ ಸರ್ಕಾರದ ಹೆಜ್ಜೆಯನ್ನು ಖಂಡಿಸಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆಯನ್ನು ಅಂದಿನ ಸರ್ಕಾರ ಕೈಬಿಟ್ಟಿದೆ. ಈ ಬಗ್ಗೆ ದಾಖಲೆಗಳಲ್ಲಿ ಸ್ವಷ್ಟ ಉಲ್ಲೇಖವಿದೆ. ಆದರೆ, ನೂರು ವರ್ಷಗಳ ನಂತರ ಈ ಯೋಜನೆಯನ್ನು ಮತ್ತೆ ಜಾರಿಗೊಳಿಸುವ ಹುನ್ನಾರ ನಡೆದಿರುವುದರಿಂದ ಈ ಭಾಗದ 8 ಗ್ರಾಮಗಳ ಸುಮಾರು 800 ಕ್ಕೂ ಅಧಿಕ ಕುಟುಂಬಗಳು ಅಸ್ಥಿರತೆಯ ಭಯ ಎದುರಿಸುತ್ತಿವೆ. ಆದ್ದರಿಂದ, ಈ ಕುಟುಂಬಗಳ ರಕ್ಷಣೆಯ ದೃಷ್ಟಿಯಿಂದ ಈ ಯೋಜನೆ ಜಾರಿಗೊಳಿಸಿದಂತೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.

ನಿಯೋಗದಲ್ಲಿ ಬೈರಮುಡಿಚಂದ್ರು, ಸುಭಾಷ್, ಅರವಿಂದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net