ಶಿಥಿಲಗೊಂಡಿದ್ದ ವಿದ್ಯುತ್ ಕಂಬ ತೆರವು, ಹೊಸದು ಅಳವಡಿಕೆ

Removal of dilapidated electric pole, installation of new one
Published on

ಹಾನಗಲ್ಲ: ತಾಲೂಕಿನ ಮಾಸನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಳಗೇರಿ ಗ್ರಾಮದಲ್ಲಿ ಶಿಥಿಲಗೊಂಡಿದ್ದ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಹಾಕಲು ಹೆಸ್ಕಾಂ ಮುಂದಾಗಿದೆ.

ವಳಗೇರಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಆರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಶಿಥಿಲಗೊಂಡಿದ್ದವು. ಕಂಬಗಳ ಸಿಮೆಂಟ್ ಕಿತ್ತು ಹೋಗಿ ತುಕ್ಕು ಹಿಡಿದ ಕಬ್ಬಿಣದ ರಾಡ್​ಗಳು ಕಾಣುತ್ತಿದ್ದವು. ಇದೇ ಮಾರ್ಗದಲ್ಲಿ ಶಾಲಾ ವಿದ್ಯಾರ್ಥಿಗಳು ತೆರಳುತ್ತಿದ್ದರು. ಗ್ರಾಮಸ್ಥರು ಶಿಥಿಲಗೊಂಡಿದ್ದ ಈ ಕಂಬಗಳಿಂದ ಅಪಾಯದ ಆತಂಕ ವ್ಯಕ್ತಪಡಿಸಿದ್ದರು. ಈ ಕಂಬಗಳ ಜಿಪಿಎಸ್ ಫೋಟೋಗಳನ್ನೂ ಹೆಸ್ಕಾಂ ಅಕಾರಿಗಳಿಗೆ ಕಳಹಿಸಿಕೊಡಲಾಗಿತ್ತು. ಮಾಸನಕಟ್ಟಿ ಗ್ರಾಪಂ ಸದಸ್ಯರು, ಗ್ರಾಮಸ್ಥರು ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೂ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಿರಲಿಲ್ಲ.

ಅಯ್ಯೋ ಪ್ರಾಬ್ಲಂ ಕಣ್ರೀ ವಿಭಾಗದಲ್ಲಿ ‘ಅಪಾಯಕ್ಕೆ ಆಹ್ವಾನಿಸುವ ವಿದ್ಯುತ್ ಕಂಬ’ ಶೀರ್ಷಿಕೆಯಡಿ ಏ. 2ರಂದು ವಿಜಯವಾಣಿ ವರದಿ ಪ್ರಕಟಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net