

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಮಾಜದ ಋಣ ತೀರಿಸುವ ಸಂಸ್ಕಾರ ಪ್ರತಿಯೊಬ್ಬರಲ್ಲಿಯೂ ಇರಬೇಕು. ಆಗ ಮಾತ್ರ ಜೀವನ ಸಾರ್ಥಕ ಆಗುತ್ತದೆ ಎಂದು ಉಪ್ಪಿನ ಬೆಟಗೇರಿಯ ಮೂರುಸಾವಿರ ವಿರಕ್ತ ಮಠದ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.
ತಾಲೂಕಿನ ನರೇಂದ್ರ ಗ್ರಾಮದ ಮಳೆಪ್ಪಜ್ಜನ ಮಠದ ಪೀಠಾಧಿಪತಿ ದುಂಡಯ್ಯ ಅಜ್ಜನವರ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಬದುಕಿನಲ್ಲಿ ಸ್ವಾರ್ಥಕ್ಕಿಂತ ನಿಸ್ವಾರ್ಥಕ್ಕೆ ಹೆಚ್ಚು ಮೌಲ್ಯ . ನಮ್ಮ ಜೀವನ ಕೂಡ ಸಮಾಜಮುಖಿ ಆಗಬೇಕು. ಆ ದಿಸೆಯಲ್ಲಿ ಸದಾ ಚಿಂತನೆ ಅಗತ್ಯ. ಈ ವಾಸ್ತವದ ಅರಿವು ಎಲ್ಲರಿಗೂ ಇರಬೇಕು. ಭಕ್ತರ ಮನೆ ಬಾಗಿಲಿಗೆ ತೆರಳಿ ಭಿಕ್ಷೆ ಬೇಡಿ ತಂದು ಮಠದ ವೃದ್ಧಿಗೆ ಶ್ರಮಿಸಿದ ದುಂಡಯ್ಯ ಸ್ವಾಮೀಜಿ, ಹಸಿದವರಿಗೆ ಅನ್ನವನ್ನು ಉಣಬಡಿಸಿದವರು. ಜೀವನದುದ್ದಕ್ಕೂ ಮಠ ಮತ್ತು ಮಠದ ಭಕ್ತರ ಹಿತ ಬಯಸಿ ಅಪಾರ ಭಕ್ತ ಸಮೂಹವನ್ನು ಗಳಿಸಿದರು. ಅವರ ಸಮಾಧಿಯನ್ನು ಅಭಿವೃವೃಪಡಿಸಿ, ಅಲ್ಲಿ ನಿತ್ಯ ಧ್ಯಾನ ನಡೆಯುವಂತಾಗಬೇಕು ಎಂದರು.
ಮಳೆಪ್ಪಜ್ಜನ ಮಠದ ಪೀಠಾಽಕಾರಿ ಶ್ರೀ ಸಂಗಮೇಶ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.
ಹುಬ್ಬಳ್ಳಿ ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಶಿರಕೋಳದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯರು, ಉಗರಗೋಳ ನಿರ್ವಾಣೇÃಶ್ವರಮಠದ ಶ್ರೀ ಮಹಾಂತಸ್ವಾಮೀಜಿ, ಕಲ್ಯಾಣದ ಪಂಡಿತಾರಾಧ್ಯರು, ಹೊಸೂರನ ಶ್ರೀ ಗಂಗಾಧರ ಸ್ವಾಮೀಜಿ, ಮುಂಡರಗಿಯ ಹಿರಿಶಾಂತ ಸ್ವಾಮೀಜಿ, ಬೆಳಗಾವಿಯ ನಿಶ್ಚಲಸ್ವರೂಪ ಶ್ರೀ, ದೇವರಶೀಗಿಹಳ್ಳಿಯ ವೀರೇಶ್ವರ ಸ್ವಾಮೀಜಿ, ಮೊರಬದ ಮಹೇಶ್ವರ ಸ್ವಾಮೀಜಿ, ಯÁದವಾಡ ಆನಂದಾಶ್ರಮದ ಆನಂದ ಸ್ವಾಮೀಜಿ, ಶೂರ್ಪಾಲಿ ಸಾರಂಗಮಠದ ಸುನಂದಮ್ಮನವರು, ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟ್ ಪ್ರಭುಲಿಂಗಸ್ವಾಮಿ ಹಿರೇಮಠ, ಇತರರಿದ್ದರು.
ನರೇಂದ್ರ ಮತ್ತು ವಿವಿಧ ಗ್ರಾಮಗಳ ಅಪಾರ ಭಕ್ತರು ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿದ್ದರು.