ಕರ್ನಾಟಕ ಏಕೀಕರಣದ ರೂವಾರಿಗಳ ಸ್ಮರಣೆ ಅಗತ್ಯ

farmer
ಮುಂಡರಗಿ ತಾಲೂಕಿನ ಡಂಬಳ ಜೆ.ಟಿ. ಪಿಯು ಕಾಲೇಜು, ಹಾಗೂ ಜೆ.ಟಿ. ಬಾಲಕರ, ಮತ್ತು ಬಾಲಕಿಯರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಜರುಗಿದ ಉಪನ್ಯಾಸ ಕಾರ್ಯಕ್ರಮವನ್ನು ಪ್ರಗತಿಪರ ರೈತ ಗೋಣಿಬಸಪ್ಪ ಕೊರ್ಲಹಳ್ಳಿ ಉದ್ಘಾಟಿಸಿದರು. ಪ್ರಭು ಸೊಪ್ಪಿನ, ಎಂ.ಜಿ.ಗಚ್ಚಣ್ಣವರ, ಜಿ.ವಿ.ಹಿರೇಮಠ ಇತರರಿದ್ದರು.
Published on

ಮುಂಡರಗಿ: ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಅನೇಕ ಮಹನೀಯರು ಕರ್ನಾಟಕ ಏಕೀರಣಕ್ಕಾಗಿ ತಮ್ಮ ಬರಹ ಮತ್ತು ಹೋರಾಟ ಮೂಲಕ ಸಾಧನೆ ಮಾಡಿದ್ದಾರೆ. ಅದರ ಫಲವಾಗಿಯೇ ಇಂದು ಕರ್ನಾಟಕವಾಗಿದೆ. ಅಂತಹ ಮಹನೀಯರ ಸಾಧನೆ ವಿದ್ಯಾರ್ಥಿಗಳಿಗೆ ಪರಿಚಯವಾಗಬೇಕು ಎಂದು ಪ್ರಗತಿಪರ ರೈತ ಗೋಣಿಬಸಪ್ಪ ಕೊರ್ಲಹಳ್ಳಿ ಹೇಳಿದರು.

ತಾಲೂಕಿನ ಡಂಬಳ ಗ್ರಾಮದ ಜೆ.ಟಿ. ಬಾಲಕರ ಮತ್ತು ಜೆ.ಟಿ.ಬಾಲಕಿಯರ ಪ್ರೌಢಶಾಲೆ ಮತ್ತು ಪಿಯು ಕಾಲೇಜಿನಲ್ಲಿ ತಾಲೂಕು ಕಸಾಪ ಆಶ್ರಯದಲ್ಲಿ ಇತ್ತೀಚೆಗೆ ಜರುಗಿದ ಆಲೂರು ವೆಂಕಟರಾಯರ ಜೀವನ ಸಾಧನೆ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹುಯಿಲಗೋಳ ನಾರಾಯಣರು ಸೇರಿ ಹಲವರು ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ್ದಾರೆ. ಗದುಗಿನ ಕುಮಾರವ್ಯಾಸ ಸಾಹಿತ್ಯ ದೇಶದಲ್ಲಿಯೇ ಮನೆ ಮಾಡಿದೆ. ಕನ್ನಡ ನಾಡು ನುಡಿಯ ಬಗ್ಗೆ ಕಸಾಪ ಅರಿವು ಮೂಡಿಸುವ ಕೆಲಸ ನಿರಂತರವಾಗಿ ಮಾಡುತ್ತಿದೆ. ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ಜನಪದ ಕಲೆ ಇತರ ಹಲವಾರು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.

ಉಪನ್ಯಾಸಕ ಪ್ರಭು ಸೊಪ್ಪಿನ ಮಾತನಾಡಿ, ಆಲೂರು ವೆಂಕಟರಾಯರು, ಬರಹಗಾರರಾಗಿ, ಲೇಖಕರಾಗಿ ಮತ್ತು ವಿಶೇಷವಾಗಿ ಕರ್ನಾಟಕದ ಏಕೀಕರಣದ ಪಿತಾಮರಾಗಿ ಕನ್ನಡ ಕುಲಪುರೋಹಿತ ಎಂದು ಕರೆಸಿಕೊಂಡರು.

ಕರ್ನಾಟಕ ಏಕೀಕರಣವಾಗಲು ರಾಜ್ಯದ ಹಲವಾರು ಸಾಹಿತಿಗಳನ್ನು ಬರಹಗಾರರನ್ನು ಒಂದು ಕಡೆಗೆ ಸೇರಿಸಿ ಲೇಖನ ಬರೆಸುವ ಮೂಲಕ ಹೋರಾಟಕ್ಕೆ ಚಾಲನೆ ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ, ಜೆ.ಟಿ.ಮಠದ ವ್ಯವಸ್ಥಾಪಕ ಜಿ.ವಿ.ಹಿರೇಮಠ ಮಾತನಾಡಿದರು. ಮುಖ್ಯಶಿಕ್ಷಕ ಶಂಕರ ಕಲ್ಲಿಗನೂರ, ಸಂಜೋತಾ ಸಂಕಣ್ಣವರ, ಲಿಂಗರಾಜ ದಾವಣಗೆರೆ, ಕೃಷ್ಣಮೂರ್ತಿ ಸಾಹುಕಾರ, ವಿಜಯ ಹಿರೇಮಠ, ಹಂಚಿನಾಳ ಉಪಸ್ಥಿತರರು ಇದ್ದರು. ಸಿ.ಕೆ. ಗಣಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ತಳವಾರ ಸ್ವಾಗತಿಸಿದರು. ಎ.ಬಿ.ಬೇವಿನಕಟ್ಟಿ ನಿರೂಪಿಸಿದರು. ಎ.ಬಿ.ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net