ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೆ

20
Published on

ಮೈಸೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 194ನೇ ಹುತಾತ್ಮ ದಿನ ಹಾಗೂ ಗಣರಾಜ್ಯೋತ್ಸವ ಆಚರಿಸಲಾಯಿತು.

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕುರುಬಾರಳ್ಳಿ)ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರು ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

ಈ ವೇಳೆ ನಿವೃತ್ತ ಸೈನಿಕ ಕುರುಬಾರಹಳ್ಳಿಯ ಎಂ.ವೆಂಕಟೇಶ್, ಕುರುಬಾರಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿ.ಆರ್.ನವೀನ್, ನಿವೃತ್ತ ಪೊಲೀಸ್ ಅಧಿಕಾರಿ ಸುಬ್ಬಣ್ಣ ಅವರನ್ನು ಸನ್ಮಾನಿಸಲಾಯಿತು.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ನಗರ ಪಾಲಿಕೆ ಮಾಜಿ ಸದಸ್ಯ ಎಂ.ಶಿವಣ್ಣ, ಮುಖಂಡರಾದ ಕ್ಯಾಂಟೀನ್ ನಾಗಣ್ಣ, ಸಮಿತಿಯ ಅಧ್ಯಕ್ಷ ಟಿ.ಮಂಜುನಾಥ್, ಉಪಾಧ್ಯಕ್ಷ ಮಹದೇವು, ಆಶ್ರಯ ಸಮಿತಿ ಸದಸ್ಯ ಕುರುಬಾರಳ್ಳಿ ಸೋಮಶೇಖರ್, ಮುಖಂಡರಾದ ರವಿ, ಧನಂಜಯ, ಕುರುಬಾರಳ್ಳಿ ಪ್ರಕಾಶ್, ಕ್ಯಾಂಟೀನ್ ರವಿ, ಚಂದ್ರಶೇಖರ್,ಪವನ್ ಚಂಗಪ್ಪ ವಿಶ್ವನಾಥ್, ನಜರಾಬಾದ್ ನಟರಾಜು, ಡೇರಿ ವೆಂಕಟೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net