ಗುರು ಸ್ಮರಣೆಯಿಂದ ಪುಣ್ಯಪ್ರಾಪ್ತಿ

SWAMIJI
Published on

ಕಲಘಟಗಿ: ಗುರು ಸ್ಮರಣೆ ಮಾಡುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ ಎಂದು ಅಂತೂರ ಬೆಂತೂರು ಬೂದಿಸ್ವಾಮಿ ಮಠದ ಕುಮಾರದೇವರು ಹೇಳಿದರು.

ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ಕಲ್ಲಯ್ಯ ಸ್ವಾಮಿಗಳ ಸ್ಮರಣೋತ್ಸವ ಅಂಗವಾಗಿ ಆಯೋಜಿಸಿದ್ದ ಪ್ರವಚನದಲ್ಲಿ ಮಾತನಾಡಿದ ಅವರು, ಕಾಯಕ ದಾಸೋಹ ತತ್ವದ ತಳಹದಿಯಾಗಿರುವ ಕಲ್ಯಾಣದ ಶರಣರ ದಿವ್ಯ ಪರಂಪರೆಯನ್ನು ನಾಡಿಗೆ ಮತ್ತೆ ಬೆಳಗಿಸಿರುವ ಕಲ್ಯಯ್ಯಸ್ವಾಮಿಗಳ ಬದುಕು ನಾಡು ನುಡಿ ಸಂಸ್ಕೃತಿಯನ್ನು ಶ್ರೀ ಮಂತಗೊಳಿಸಿದೆ ಎಂದರು.

ತಮ್ಮ ತಪಸ್ಸಿನ ಫಲವನ್ನು ಸಮಸ್ತ ಸದ್ಭಕ್ತರಿಗೆ ಕರುಣಿಸಿ ಸಮಾಜ ಸಂಜೀವಿನಿಯಾಗಿರುವರು. ಬೆಲವಂತರದ ಪೂಜ್ಯ ಚನ್ನಬಸವ ಸ್ವಾಮಿಗಳವರ ಅವತಾರಕ್ಕೆ ವರವನ್ನಿತ್ತವರು. ಸರಳ ಸಜ್ಜನಿಕೆಯ ಮಾತೃ ಮನದ ಕ್ರಿಯಾಶೀಲ ಶಿವಯೋಗಿ ಜಂಗಮರಾಗಿದ್ದರು ಎಂದರು. ಇದೇ ಸಂದರ್ಭದಲ್ಲಿ ಕುಮಾರದೇವರಿಗೆ ಜಾನಪದ ತತ್ವಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶ್ರೀ ಕಲ್ಲಯ್ಯಸ್ವಾಮಿಗಳ ಪುಣ್ಯಸ್ಮರಣೋತ್ಸವ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅನ್ನದಾಸೋಹಿಗಳಿಗೆ ಸೇವಾಧಾರಿಗಳನ್ನು ಸನ್ಮಾನಿಸಲಾಯಿತು.

ಈಶ್ವರ ಸ್ವಾಮಿಗಳು ಎಮ್ಮೆಟ್ಟಿ, ತಾ.ಪಂ. ಮಾಜಿ ಅಧ್ಯಕ್ಷ ಮಲ್ಲೇಶಪ್ಪ ಜಾವೂರ, ಗ್ರಾ.ಪಂ. ಅಧ್ಯಕ್ಷ ಬಸವರಾಜ ಪರವಾಪೂರ, ಜಾನಪದ ತಾಲೂಕು ಪರಿಷತ್ ಅಧ್ಯಕ್ಷ ಮಲ್ಲಯ್ಯ ತೋಟಗಂಟಿ, ಎಚ್.ಎನ್. ಸುಣಗದ, ಜಿ.ಎನ್. ಗಾಳಿ, ಗದಗಯ್ಯ ಹಿರೇಮಠ, ಕಲ್ಲಯ್ಯ ಹಿರೇಮಠ, ಸಿದ್ದಯ್ಯ ಹಿರೇಮಠ, ಸಿದ್ದರಾಮಯ್ಯ ಪಟ್ಟದಯ್ಯನವರ, ಸಂಗಯ್ಯ ಹಿರೇಮಠ, ಶಿವಯ್ಯ ಹಿರೇಮಠ, ಸುಪುತ್ರಯ್ಯ ಆಲದಕಟ್ಟಿ, ಕೋಟೆಪ್ಪ ಕುಬ್ಯಾಳ, ಬಸವರಾಜ ಕಾಮಧೇನು, ಶಿವಪ್ಪ ತುಮರಿಕೊಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net