

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಶರಣ ಪರಂಪರೆಯ ಮಹಾಸಂತ ಸಿದ್ಧಗಂಗೆಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯಾಗಿದ್ದಾರೆ ಎಂದು ಬಿಜೆಪಿ ಮುಖಂಡ ಕೆಂಗೇರಿಯ ಜಿ.ಮುನಿರಾಜು ಅಭಿಪ್ರಾಯಪಟ್ಟರು.
ಸೋಂಪುರ ಹೋಬಳಿಯ ಬರಗೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 5ನೇ ಪುಣ್ಯಸ್ಮರಣೆ ಹಾಗೂ ದಾಸೋಹ ದಿನದಲ್ಲಿ ಮಾತನಾಡಿದರು. ಶ್ರೀಗಳು ಧರ್ಮ, ತ್ಯಾಗ, ಮಾನವೀಯತೆಯ ಪ್ರತಿರೂಪವಾಗಿ, ಸಿದ್ಧಗಂಗಾ ಮಠದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತೆ ಮಾಡಿದ ಜ್ಞಾನಜ್ಯೋತಿಯಾಗಿದ್ದಾರೆ. ಬದುಕನ್ನೇ ಸಮಾಜಕ್ಕೆ ಅರ್ಪಣೆ ಮಾಡಿಕೊಂಡ ಮಹಾನುಭಾವ. ಇಡೀ ಜಗತ್ತಿಗೆ ಬೆಳಕನ್ನು ನೀಡಿದ ಆಧ್ಯಾತ್ಮಿಕ ಚಿಂತಕ ಎಂದು ಬಣ್ಣಿಸಿದರು.
ಮುಖಂಡ ಬರಗೇನಹಳ್ಳಿ ಬಿ.ಸಿ.ವೀರಣ್ಣ ಮಾತನಾಡಿ, ಸಿದ್ಧಗಂಗಾ ಶ್ರೀಗಳ ಮಾತುಗಳು ಅನುಭಾವದ ನುಡಿಗಳಾಗಿದ್ದವು. ಅವರು ಭೌತಿಕವಾಗಿ ಇಲ್ಲದಿದ್ದರೂ ನಮ್ಮೆಲ್ಲರ ಮನಸ್ಸಿನಲ್ಲಿದ್ದಾರೆ ಎಂದರು.
ಬಿಜೆಪಿ ಮುಖಂಡ ಸಪ್ತಗಿರಿ ಶಂಕರ್ ನಾಯಕ, ತಾಪಂ ಮಾಜಿ ಅಧ್ಯಕ್ಷ ಬಿ.ಆರ್.ಪುಟ್ಟಗಂಗಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎನ್.ಪರಮೇಶ್, ಮುಖಂಡರಾದ ಚಂದನ್ ಕುಮಾರ, ದಯಾನಂದ, ಹರೀಶ ಕುಮಾರ, ಸುಚೇಂದ್ರ, ಶಿವಕುಮಾರ, ಸಂತೋಶ, ಪುನಿತ್ ಕುಮಾರ, ಬಿ.ಜೆ.ರುದ್ರೇಶ, ಗೋಟ್ಟಿಕೆರೆ ಪುಟ್ಟಸಿದ್ದು, ಶಿವಗಂಗೆ ಚಂದ್ರಕುಮಾರ ಸ್ವಾಮಿ, ಹೊಸಪಾಳ್ಯ ಸುರೇಶ, ಕೆಂಗಲ್ ಶ್ರೀನಿವಾಸ, ಸೂರ್ಯ ಕುಮಾರ, ಶಶಿ ಕುಮಾರ, ವಸಂತ ಕುಮಾರ, ಕೇಶವ ಮೂರ್ತಿ ಇದ್ದರು.