

ಭದ್ರಾವತಿ: ದೇಶಕ್ಕಾಗಿ ವೀರ ಬಲಿದಾನ ಮಾಡಿದಂತಹ ವೀರ ಮತ್ತು ವೀರಾಂಗನೆಯರಿಗೆ ಗೌರವ ಸಮರ್ಪಿಸಲು ದೇಶಾದ್ಯಂತ ಅಮೃತ ಕಲಶ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಭದ್ರಾವತಿ ಮಂಡಲದ ಅಧ್ಯಕ್ಷ ಜಿ.ಧರ್ಮಪ್ರಸಾದ್ ತಿಳಿಸಿದರು.
ತಾಲೂಕಿನ ಕಾರೇಹಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಮೂಲೆ ಮೂಲೆಗಳಿಂದ ಇಂದು ಮೃತ್ತಿಕೆಯನ್ನು ಸಂಗ್ರಹಿಸಲಾಗುತ್ತಿದೆ. ವೀರ ಯೋಧರ ನೆನಪಿನಲ್ಲಿ ವಿಶೇಷ ಶಿಲಾನ್ಯಾಸ ಅನಾವರಣಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶ ವ್ಯಾಪಿ ಕರೆ ನೀಡಿದ್ದಾರೆ. ದೇಶಕ್ಕಾಗಿ ವೀರ ಸೈನಿಕರು ಮಾಡಿದಂತಹ ಮಹತ್ಯಾಗ, ಬಲಿದಾನವನ್ನು ಎಂದೆಂದಿಗೂ ಮರೆಯುವಂತಿಲ್ಲ ಎಂದರು.
ಮಾಜಿ ಸೈನಿಕರು ಹಾಗೂ ಅವರ ಕುಟುಂಬ ವರ್ಗದವರು, ಕಾರ್ಯಕರ್ತರು, ಗ್ರಾಮಸ್ಥರೆಲ್ಲ ಸೇರಿ ಅಮೃತ ಕಳಸಕ್ಕೆ ಪೂಜೆ ಸಲ್ಲಿಸಿ ಪವಿತ್ರ ಮಣ್ಣನ್ನು ಭಕ್ತಿ ಪೂರ್ವಕವಾಗಿ ಸಮರ್ಪಿಸಿದರು. ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.
ಭದ್ರಾವತಿ ಮಂಡಲದ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಅಭಿಯಾನದ ಸಂಚಾಲಕ ಮಸರಳ್ಳಿ ಅಣ್ಣಪ್ಪ, ಮಾಜಿ ಸೈನಿಕರ ಪ್ರಕೋಷ್ಠದ ಸಂಚಾಲಕ ಅಭಿಲಾಷ್, ಸಹಸಂಚಾಲಕ ನಾರಾಯಣಪ್ಪ. ಧರ್ಮರಾಜ್, ಜಯಮ್ಮ, ಪ್ರಮುಖರಾದ ಪರಮೇಶ್, ಶಿವಕುಮಾರ್, ಸೋಮಶೇಖರ್, ನಾಗರಾಜ್, ಕುಮಾರ್, ಶೇಖರಯ್ಯ, ವೆಂಕಟೇಶ್, ಮಂಜುನಾಥ್, ಪ್ರಸನ್ನಕುಮಾರ್, ಉಮಾವತಿ, ಅನ್ನಪೂರ್ಣಾ ಸಾವಂತ್, ಕವಿತಾ ರಾವ್, ಆಶಾ ಪುಟ್ಟಸ್ವಾಮಿ, ಉಷಾ ವೀರಶೇಖರ್, ಕೋಮಲಾ, ಪ್ರಶಾಂತ್, ರಾಘವೇಂದ್ರ, ಪ್ರದೀಪ್, ವೆಂಕೋಬ್ ರಾವ್, ಮಧು, ಜಗದೀಶ್, ಷಡಕ್ಷರಿ, ಕುಮಾರ್, ಶ್ರೀನಿವಾಸ್, ಚಂದನ್, ಸುನಿಲ್ ಇದ್ದರು.