ರಾಮಭಟ್ಟರ ನೆನಪಿನಲ್ಲಿ ರಾಮ ಸ್ಮರಣೆ

rama smarane
ಸುದ್ದಿಗೋಷ್ಠಿಯಲ್ಲಿ ಶೃಂಗೇರಿ ಎಚ್.ಎಸ್.ನಾಗರಾಜ್ ಮಾತನಾಡಿದರು, ಶಬರೀಶ್ ಕಣ್ಣನ್, ಅರುಣ್‌ಕುಮಾರ್, ಶ್ರೀಧರ್, ಜಯಶ್ರೀ ಶ್ರೀಧರ್, ಅರವಿಂದ ಹೊಳ್ಳ ಮುಂತಾದವರಿದ್ದರು.
Published on

ಶಿವಮೊಗ್ಗ:ರವೀಂದ್ರ ನಗರ ಗಣಪತಿ ದೇವಾಲಯದ ಪ್ರಧಾನ ಅರ್ಚಕರಾಗಿದ್ದ ಅ.ಪ.ರಾಮಭಟ್ಟರು ನಿಧನರಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಟ್ಟರ ಅನುಯಾಯಿಗಳು, ವಿವಿಧ ಸಾಂಸ್ಕೃತಿಕ ಸಂಘಟನೆಗಳ ಪ್ರಮುಖರು, ಸಮಾನ ಮನಸ್ಕರು ಒಗ್ಗೂಡಿ ಫೆ.16ರಿಂದ ಮಾ.18ರವರೆಗೆ ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ರಾಮ ಸ್ಮರಣೆ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಒಂದು ತಿಂಗಳ ಕಾರ್ಯಕ್ರಮದ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಗುರುಗುಹ ಸಂಗೀತ ವಿದ್ಯಾಲಯದ ವಿದ್ವಾನ್ ಶೃಂಗೇರಿ ಎಚ್.ಎಸ್.ನಾಗರಾಜ್, ಪ್ರತಿ ದಿನ ಸಂಜೆ 5.30ರಿಂದ ಒಂದು ತಾಸು ಎರಡು ಭಜನಾ ತಂಡಗಳು ಭಜನೆ ಪ್ರಸ್ತುತಪಡಿಸಲಿವೆ. ಸಂಜೆ 6.30ರಿಂದ 8.30ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಭಜನಾ ಪರಿಷತ್ ಕಾರ್ಯದರ್ಶಿ ಶಬರೀಶ್ ಕಣ್ಣನ್, ಉಪಾಧ್ಯಕ್ಷ ಎನ್.ಶ್ರೀಧರ್, ಮೃದಂಗ ವಿದ್ವಾನ್ ಅರವಿಂದ ಹೊಳ್ಳ, ಜಿಲ್ಲಾ ಬ್ರಾಹ್ಮಣ ಮಹಾಸಭಾ ನಿರ್ದೇಶಕ ಶಂಕರನಾರಾಯಣ, ಸುಗಮ ಸಂಗೀತ ಗಾಯಕರಾದ ಜಯಶ್ರೀ ಶ್ರೀಧರ್, ಲಕ್ಷ್ಮೀ ಮಹೇಶ್, ವಿನಯ್ ಶಿವಮೊಗ್ಗ, ವಿದ್ವಾನ್ ಅರುಣ್ ಕುಮಾರ್ ಇದ್ದರು.
ಮೊದಲ 10 ದಿನಗಳ ಕಾರ್ಯಕ್ರಮಗಳ ವಿವರ:
ಫೆ.16-18: ವಿದ್ವಾನ್ ವಿನಾಯಕ ಎಸ್.ರಾವ್ ಅವರಿಂದ ರಾಮಾಯಣದ ಪಾತ್ರಗಳ ಪರಿಚಯ ಕುರಿತು ಉಪನ್ಯಾಸ
19:ಯಕ್ಷ ಸಂವರ್ಧನ ಸಭಾದಿಂದ ಚಂದ್ರಹಾಸ ಚರಿತ್ರೆ ಯಕ್ಷಗಾನ ಪ್ರದರ್ಶನ
20: ವಿದ್ವಾನ್ ಅರುಣ್‌ಕುಮಾರ್ ಅವರಿಂದ ಭಕ್ತಿ ಸಂಗೀತ ಗಾಯನ
21: ಸಂಧ್ಯಾ ರಾಮನ್ ಅವರಿಂದ ಗಿಟಾರ್ ಹಾಗೂ ವಯೋಲಿನ್ ವೈವಿಧ್ಯ
23: ಪ್ರಶಾಂತ್ ಬೆಂಕಟವಳ್ಳಿ ಅವರಿಂದ ಗಮಕ ವಾಚನ-ವ್ಯಾಖ್ಯಾನ
24: ಕಲಾರ್ಪಣಮ್ ಕಲೋತ್ಸವ ಸಂಗೀತ ನೃತ್ಯ ಸಂಜೆ
25: ಸಹನಾ ಚೇತನ್ ಹಾಗೂ ಶಿಷ್ಯರಿಂದ ನೃತ್ಯ ಕಾರ್ಯಕ್ರಮ
26: ಶಬರೀಶ್ ಹಾಗೂ ಕಾರ್ತಿಕ್ ಸಹೋದರರಿಂದ ಸ್ಯಾಕ್ಸೋಫೋನ್ ವಾದನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net