

ಮುಂಡರಗಿ: ಮಹಾತ್ಮರನ್ನು ಸದಾ ನೆನಪಿಸಿಕೊಳ್ಳುತ್ತೇವೆ. ಮಹಾತ್ಮರಿಗೆ ಎಂದೂ ಸಾವಿಲ್ಲ . ಸಾಧನೆ ಮಾಡಿದವರು ಕಾಲ, ಕರ್ಮವನ್ನು ಗೆದ್ದವರು. ಇಂಥ ಜಾತ್ರಾ ಮಹೋತ್ಸವದ ಮೂಲಕ ಅಂತಹ ಮಹನೀಯರನ್ನು ನೆನೆಯಬೇಕಿದೆ ಎಂದು ಡಂಬಳ- ಗದಗನ ಡಾ.ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯ ಮದರ್ಧನಾರೀಶ್ವರರ 285ನೇ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಜರುಗಿದ ರಥೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನಮ್ಮ ಕಷ್ಟ, ಕಾರ್ಪಣ್ಯ ದೂರವಾಗಬೇಕಾದರೆ ಮದರ್ಧನಾರೀಶ್ವರಂತಹ ಮಹಾತ್ಮರನ್ನು ನೆನೆಯಬೇಕು. ಡಂಬಳ ಮಠದ ಪ್ರಾಂಗಣದಲ್ಲಿ ಭವ್ಯವಾದ ಕಟ್ಟಡ ನಿರ್ಮಾಣವಾಗುತ್ತಿದ್ದು, ಅದಕ್ಕೆ ಭಕ್ತರು, ದಾನಿಗಳು, ದಾಸೋಹಿಗಳ ಸಹಕಾರ ಮುಖ್ಯವಾಗಿದೆ. ಭಕ್ತರ ಕಾರ್ಯ ಪ್ರಶಂಸನೀಯ ಎಂದು ಹೇಳಿದರು.
ಜಾತ್ರಾ ಮಹೋತ್ಸವ ನಿಮಿತ್ತ ಡೊಳ್ಳಿನ ಪದಗಳ ಗಾಯನ, ಹಲವು ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ, ಸದಸ್ಯೆ ಯಲ್ಲಮ್ಮ ಬಂಡಿ, ಜಾತ್ರಾ ಸಮಿತಿ ಅಧ್ಯಕ್ಷ ಭೀಮಪ್ಪ ಗದಗ, ಯಲ್ಲಪ್ಪ ದಂಡಿನ, ವಿರೂಪಾಕ್ಷಪ್ಪ ಲಕ್ಕುಂಡಿ, ಜಿ.ವಿ. ಹಿರೇಮಠ, ವಿ.ಎಸ್. ಯರಾಶಿ, ಚನ್ನಬಸಪ್ಪ ಪಟ್ಟಣಶೆಟ್ಟರ, ಕಳಕಪ್ಪ ರೋಣದ, ಮುತ್ತಪ್ಪ ರೋಣದ, ಅಮರಯ್ಯ ಹಿರೇಮಠ, ನಿಂಗಪ್ಪ ಕೊರ್ಲಹಳ್ಳಿ, ಶರಣಬಸಪ್ಪ ದೇವರಮನಿ, ವೆಂಕಟೇಶ ಲಮಾಣಿ, ಚೆನ್ನಪ್ಪಗೌಡ ಪಾಟೀಲ, ಮಲ್ಲಯ್ಯ ಹಿರೇಮಠ, ಸುರೇಶ ಗೋಡಿ, ಶಂಕರಗೌಡ ಪಾಟೀಲ, ಹೊನ್ನಪ್ಪ ಭೋವಿ, ಆರ್.ಜಿ. ಕೊರ್ಲಹಳ್ಳಿ, ಕೆ.ಬಿ. ಕಂಬಳಿ ಇತರರಿದ್ದರು.