ಹಿರೇಕೆರೂರಲ್ಲಿ ವೀರ ಜವಾನರ ಸ್ಮರಣೆ

HKR PANJI MERAVANIGE
Published on

ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷಾಚರಣೆ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಹಿರೇಕೆರೂರ, ರಟ್ಟಿಹಳ್ಳಿ ತಾಲೂಕಿನ ಮಂಡಲದ ವತಿಯಿಂದ ಗುರುವಾರ ಬಿಜೆಪಿ ಕಾರ್ಯಾಲಯದಲ್ಲಿ ವಿಜಯ ದೀಪ ಬೆಳಗಿಸಲಾಯಿತು.

ಚಾವಡಿ ವೃತ್ತದಿಂದ ಸರ್ವಜ್ಞ ಸರ್ಕಲ್​ವರೆಗೆ ಪಂಜಿನ ಮೆರವಣಿಗೆ ಮೂಲಕ ವೀರ ಜವಾನರನ್ನು ಸ್ಮರಿಸಲಾಯಿತು. ಮಾಜಿ ಸೈನಿಕ ಬಸವರಾಜ ಸೊರಟೂರ ಕಾರ್ಗಿಲ್ ಯುದ್ಧದ ಬಗ್ಗೆ ಅನುಭವ ಹಂಚಿಕೊಂಡರು.

ಮಾಜಿ ಸೈನಿಕರಾದ ಬಸವರಾಜ ಅರಕೇರಿ, ವೀರನಗೌಡ ಮರ್ಕಳ್ಳಿ, ಬಸವರಾಜ ಹನುಮಗೌಡ್ರ, ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ರಟ್ಟಿಹಳ್ಳಿ ತಾಲೂಕು ಬಿಜೆಪಿ ಮಂಡಲದ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ ಮಾಳಗಿ, ಸಂಜಿವ ಹಕ್ಕಳ್ಳಿ, ಸುಪ್ರಿದ ಧಾರವಾಡಕರ, ಗೋಪಾಲ ಲೆಕ್ಕಪ್ಪನವರ, ರವಿಚಂದ್ರ ಅಂಜೇರ, ಬಸವರಾಜ ವಡೆನಪುರ, ಶಿವರಾಜ ಪ್ಯಾಟಿ, ವಿಜಯ ಮಡಿವಾಳರ, ರವಿ ಕಡೂರ, ರುದ್ರೇಶ ಕೋರಿಶೆಟ್ಟರ, ವೀರೇಶ ಗೌಡರ, ಯುವ ಮೋರ್ಚಾ ಅಧ್ಯಕ್ಷ ಜಗದೀಶ್ ದೊಡ್ಡಗೌಡ್ರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net