ಶಿವಶರಣರಿಂದ ಸ್ಮರಣೆ

Remembered by Shiva Sharan
ನಾಲತವಾಡದ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರದೇವರ ಜಯಂತಿ ಆಚರಿಸಲಾಯಿತು. ಗುರುಮೂರ್ತಿ ಕಣಕಾಲಮಠ, ಮಹಾಂತಯ್ಯ ಮೆನದಾಳಮಠ, ಸಂಗಮೇಶ ಮೇಟಿ, ಶಿವಪುತ್ರಯ್ಯ ಸ್ಥಾವರಮಠ ಇತರರಿದ್ದರು.
Published on

ನಾಲತವಾಡ: ವೀರಭದ್ರನನ್ನು ಶಿವಧರ್ಮ ರಕ್ಷಕನೆಂದು ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ, ಉರಿಲಿಂಗಪೆದ್ದಿ, ಅಕ್ಕಮಹಾದೇವಿ, ಸತ್ಯಕ್ಕ ಮುಂತಾದ 12ನೇ ಶತಮಾನದ ಶಿವಶರಣರು ಸ್ಮರಿಸಿದ್ದಾರೆ ಎಂದು ಲೋಟಗೇರಿ ಗ್ರಾಮದ ಗುರುಮೂರ್ತಿ ಕಣಕಾಲಮಠ ಹೇಳಿದರು.

ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೀರಭದ್ರನ ಆರಾಧನೆ, ಆಚರಣೆಗಳು ವೈವಿಧ್ಯ ಮತ್ತು ವೈಶಿಷ್ಟೃಪೂರ್ಣವಾಗಿವೆ. ವೀರಭದ್ರನನ್ನು ಕುರಿತ ವಿಪುಲ ಸಾಹಿತ್ಯ ಬಹುಭಾಷೆಗಳಲ್ಲಿ ಸೃಷ್ಟಿಯಾಗಿದೆ.

ಅಖಿಲಭಾರತ ಮಟ್ಟದಲ್ಲಿ ವೀರಭದ್ರ ಪರಂಪರೆ ಮತ್ತು ಸಂಸ್ಕೃತಿಯನ್ನು ಅರಿಯುವಂತಾಗಲು ವೀರಭದ್ರೇಶ್ವರ ಜಯಂತಿ ಆಚರಿಸಲಾಗುತ್ತದೆ ಎಂದರು.

ವೀರಶೈವ ಲಿಂಗಾಯತ ಸಂಘಟನೆ ವೇದಿಕೆ ಅಧ್ಯಕ್ಷ ಮಹಾಂತಯ್ಯ ಮೆನದಾಳಮಠ, ಉಪಾಧ್ಯಕ್ಷ ಸಂಗಮೇಶ ಮೇಟಿ, ಜಂಗಮ ಸಮಾಜದ ಅಧ್ಯಕ್ಷ ಶಿವಪುತ್ರಯ್ಯ ಸ್ಥಾವರಮಠ, ಬಸನಗೌಡ ಹಾದಿಮನಿ, ಅಮರಪ್ಪ ಬೂದಿಹಾಳ, ದೇವಸ್ಥಾನದ ಅರ್ಚಕರಾದ ಗುರುಸ್ವಾಮಿ ಪುರವಂತಮಠ, ಬಸಯ್ಯ ಪುರವಂತಮಠ, ಚನ್ನಪ್ಪಗೌಡ ಹಂಪನಗೌಡ. ಮುರುಗಯ್ಯ ಕಂಠಿಮಠ. ಮಲ್ಲಿಕಾರ್ಜುನ ಸ್ಥಾವರಮಠ, ಚಂದ್ರು ಹಂಪನಗೌಡರ, ಗುರುಲಿಂಗಪ್ಪಗೌಡ ಹಾದಿಮನಿ, ಕಾಶಿನಾಥ ಬಿರಾದಾರ, ಮುತ್ತು ಸ್ಥಾವರಮಠ, ಶಂಕ್ರಣ್ಣ ಟಕ್ಕಳಕಿ, ಈರಣ್ಣ ಪತ್ತಾರ, ಬಾಬು ಹಂಪನಗೌಡ, ವಿಜಯ ಕಂಚನಗುಡ್ಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net