ನೆಮ್ಮದಿ ಜೀವನಕ್ಕೆ ಭಗವಂತನ ನಾಮ ಸ್ಮರಿಸಿ

23bdvt2
ಭದ್ರಾವತಿಯಲ್ಲಿ ಏರ್ಪಡಿಸಿದ್ದ ಆತ್ಮೋನ್ನತಿ ಶಿಬಿರದಲ್ಲಿ ಪ್ರೊ.ವೆಂಕಟೇಶ್ ಮಾತನಾಡಿದರು. ಸುಬ್ರಮಣ್ಯ, ಸುಧಾ ಬಾಪಟ್, ಶಾರದಮ್ಮ, ಸತೀಶ್, ಮಲ್ಲಿಕಾರ್ಜುನ್, ಲೀಲಾ, ಸಾವಿತ್ರಿ ಇತರರಿದ್ದರು.
Published on

ಭದ್ರಾವತಿ: ಭಗವಂತನ ಪಾರ್ಥನೆಯೊಂದಿಗೆ ಕೈಗೊಳ್ಳುವ ಎಲ್ಲ ಕಾರ್ಯಗಳು ನಿರ್ವಿಘ್ಞವಾಗಿ ನಡೆಯುತ್ತವೆ. ಜೀವನದಲ್ಲಿ ಯಶಸ್ಸು ಸಹ ದೊರೆಯುತ್ತದೆ ಎಂದು ಶಿವಮೊಗ್ಗದ ಡಿವೈನ್ ಪಾರ್ಕ್ನ ನಿವೃತ್ತ ಅಽಕಾರಿ ಪ್ರೊ.ವೆಂಕಟೇಶ್ ಹೇಳಿದರು. ನಗರದ ವಿವೇಕ ಜಾಗೃತ ಬಳಗದಿಂದ ನ್ಯೂಟೌನ್ ಜೆಟಿಎಸ್ ಪಕ್ಕದ ಶುಗರ್ ಟೌನ್ ಲಯನ್ಸ್ ಕ್ಲಬ್ ಕಣ್ಣಿನ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಆತ್ಮೋನ್ನತಿ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ, ಜೀವನದಲ್ಲಿ ಸಾಧನೆ, ಸೇವೆ, ಧ್ಯಾನ, ನಿಸ್ವಾರ್ಥ ಮನೋಭಾವದಿಂದ ಮಾತ್ರ ನಾನು, ನನ್ನದು, ನನ್ನಿಂದಲೆ ಎಂಬ ಅಹಂಕಾರದ ಮನೋಭಾವವನ್ನು ತೊಲಗಿಸಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಸುಬ್ರಮಣ್ಯ, ಸುಧಾ ಬಾಪಟ್, ಶಾರದಮ್ಮ , ಸತೀಶ್, ಮಲ್ಲಿಕಾರ್ಜುನ್, ಸದಾಶಿವ, ಲೀಲಾ. ಸಾವಿತ್ರಿ ಸೇರಿ ನಗರದ ವಿವೇಕ ಜಾಗೃತ ಬಳಗದ ಪದಾಽಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net