

ಕಬ್ಬೂರ: ದೇಶಕ್ಕಾಗಿ ಮಡಿದ ಮಹನೀಯರನ್ನು ನಾವೆಲ್ಲರೂ ಸ್ಮರಿಸಬೇಕು ಎಂದು ಉಪ ಪ್ರಾಂಶುಪಾಲ ರಾಜು ಮಹಿಪತಿ ಹೇಳಿದರು.
ಪಟ್ಟಣದ ಓಂ ಸೆಂಟ್ರಲ್ ಪಬ್ಲಿಕ್ ಶಾಲೆ ಹಾಗೂ ಶ್ರೀಮತಿ ಅನ್ನಪೂರ್ಣಾ ಬೆಲ್ಲದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಮೇಶ ಕಾಡೇಶಗೋಳ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮ ಜರುಗಿದವು. ಡಾ.ಪ್ರಕಾಶ ಬೆಲ್ಲದ, ರಮೇಶ ಬೆಲ್ಲದ, ಸುರೇಶ ಬೆಲ್ಲದ, ಬಸಲಿಂಗ ಕಾಡೇಶಗೋಳ, ಶಿವಪ್ಪ ಚಿಮ್ಮಟ ಇತರರಿದ್ದರು.