ಶಿವಯೋಗಿಗಳ ಸ್ಮರಿಸಿದರೆ ಸಂಕಷ್ಟ ದೂರ

4SND-02
ಒಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ಶಿವಾನುಭವಗೋಷ್ಠಿಯನ್ನು ಶ್ರೀಮಠದ ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಅಡವಿ ಅಮರೇಶ್ವರದ ಶಾಂತಮಲ್ಲ ಶಿವಾಚಾರ್ಯರು, ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ, ಕರೇಗುಡ್ಡ ಮಹಾಂತ ಶಿವಾಚಾರ್ಯರು, ಸಂತೆಕೆಲ್ಲೂರು ಗುರುಬಸವ ಸ್ವಾಮೀಜಿ, ಒಳಬಳ್ಳಾರಿ ಬಸವಲಿಂಗ ಸ್ವಾಮೀಜಿ ಇತರರಿದ್ದರು.
Published on

ಸಿಂಧನೂರು: ಜನರಲ್ಲಿ ಅಧ್ಯಾತ್ಮದ ಭಾವ ಬಿತ್ತುವಲ್ಲಿ ಸುವರ್ಣಗಿರಿ ವಿರಕ್ತಮಠದ ಕೊಡುಗೆ ಅಪಾರವಾಗಿದೆ. ಲಿಂ.ಚನ್ನಬಸವ ಶಿವಯೋಗಿಗಳು ನಡೆದಾಡಿದ ಈ ನೆಲ ಪುಣ್ಯಭೂಮಿಯಾಗಿದೆ ಎಂದು ಖೇಳಗಿ ಶಿವಲಿಂಗೇಶ್ವರ ವಿರಕ್ತಮಠದ ಶಿವಲಿಂಗಸ್ವಾಮೀಜಿ ಹೇಳಿದರು.

ತಾಲೂಕಿನ ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದಲ್ಲಿ ಸೋಮವಾರ ಸಂಜೆ ಲಿಂ.ಚನ್ನಬಸವ ಶಿವಯೋಗಿಗಳ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಶಿವಾನುಭವಗೋಷ್ಠಿಯಲ್ಲಿ ಮಾತನಾಡಿದರು. ಚನ್ನಬಸವ ಶಿವಯೋಗಿಗಳು ಈ ಭಾಗದ ಜನರ ಉದ್ಧಾರಕ್ಕೆ ಹಲವು ಪವಾಡಗಳನ್ನು ಮಾಡಿದ್ದಾರೆ. ಮನದಲ್ಲಿ ಧ್ಯಾನಿಸಿದರೆ ಸಂಕಷ್ಟ, ರೋಗಗಳು ದೂರವಾಗುತ್ತವೆ.

ಈಗಲೂ ಜನರಲ್ಲಿ ಸಂಕಷ್ಟ, ರೋಗದ ಬಾಧೆ ಶ್ರೀಮಠದಲ್ಲಿ ಬಿಟ್ಟು ಹೋಗಿ, ಸ್ವಚ್ಛಂದವಾದ ಬದುಕು ನಡೆಸುತ್ತಿರುವ ಉದಾಹರಣೆಗಳಿವೆ. ಶ್ರೀಮಠವು ಯಾವುದೇ ವೈಭವೀಕರಣಕ್ಕೆ ಒಳಗಾಗದೆ, ಈಗಿನ ಸಿದ್ಧಲಿಂಗ ಸ್ವಾಮೀಜಿಗಳ ಲಿಂಗಪೂಜೆಯಿಂದ ಹೆಚ್ಚಿನ ಪಾವಿತ್ರ್ಯತೆ ಪಡೆದಿದೆ ಎಂದರು.

ಹಳೆಕೋಟೆ ಮರಿಶಿವಯೋಗಿಶ್ವರಮಠದ ಸಿದ್ಧಬಸವ ಸ್ವಾಮೀಜಿ ಮಾತನಾಡಿ, ಇದೊಂದು ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿದೆ. ಈ ಭಾಗದ ಜನರು ಭಕ್ತಿಭಾವದಲ್ಲಿ ಹೆಚ್ಚಿನ ಶಕ್ತಿ ಪಡೆದುಕೊಂಡಿದ್ದಾರೆ. ಭಕ್ತರ ಬದುಕಿಗೆ ಶ್ರೀಮಠದ ಬೆಳಕು ಸದಾ ಇದೆ ಎಂದರು.

ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ, ಶ್ರೀಮಠದ ಸಿದ್ಧಲಿಂಗ ಸ್ವಾಮೀಜಿ, ಅಡವಿ ಅಮರೇಶ್ವರದ ಶಾಂತಮಲ್ಲ ಶಿವಾಚಾರ್ಯರು, ಕರೇಗುಡ್ಡ ಮಹಾಂತ ಶಿವಾಚಾರ್ಯರು, ಸಂತೆಕೆಲ್ಲೂರು ಗುರುಬಸವ ಸ್ವಾಮೀಜಿ, ಒಳಬಳ್ಳಾರಿ ಬಸವಲಿಂಗ ಸ್ವಾಮೀಜಿ, ಅಡವಿ ಅಮರೇಶ್ವರದ ತೋಂಟದಾರ್ಯ ಸ್ವಾಮೀಜಿ, ಪುರಾಣ ಪ್ರವಚನಕಾರ ಅಗಡಿ ಡಾ.ಗುರುಲಿಂಗ ಸ್ವಾಮೀಜಿ, ಗವಾಯಿ ವಿರೂಪಕ್ಷಯ್ಯ ಹಿರೇಮಠ ವಂದಲಿ, ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಜಿಪಂ ಮಾಜಿ ಸದಸ್ಯ ಅಮರೇಗೌಡ ವಿರುಪಾಪುರ, ಮಾಜಿ ಶಾಸಕ ಚಂದ್ರಶೇಖರಯ್ಯಸ್ವಾಮಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net