

ಶೃಂಗೇರಿ: ಆರ್ಥಿಕವಾಗಿ ಹಿಂದುಳಿದವರಿಗೆ ಆರೋಗ್ಯ ಸಮಸ್ಯೆ ಉಂಟಾದಾಗ ಅವರಿಗೆ ನೆರವು ನೀಡುವುದು ಮಾನವೀಯತೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಧರ್ಮಪ್ಪ ಹೆಗ್ಡೆ ಹೇಳಿದರು.
ಸಾರ್ವಜನಿಕ ಆಸ್ಪತ್ರೆ, ಲಯನ್ಸ್ ಕ್ಲಬ್ ಜಂಟಿ ಆಶ್ರಯದಲ್ಲಿ ಶುಕ್ರವಾರ ಸರ್ಕಾರಿ ಅಸ್ಪತ್ರೆಯಲ್ಲಿ ಎರಡು ದಿನದ ನೇತ್ರ ಶಸ ಚಿಕಿತ್ಸಾ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ಕಣ್ಣು ದೇಹದ ಮುಖ್ಯ ಅಂಗ. ಮಧ್ಯ ವಯಸ್ಕರಲ್ಲಿ ಕಣ್ಣಿನ ಸಮಸ್ಯೆ ಸಾಮಾನ್ಯವಾಗಿದೆ. ಕಣ್ಣಿನ ಸಮಸ್ಯೆ ಇದ್ದರೂ ತಪಾಸಣೆಗೆ ತೆರಳದೆ ಸಮಸ್ಯೆಯಲ್ಲಿ ಇರುವ ಸಾಕಷ್ಟು ಜನರಿದ್ದರೆ. ವೈದ್ಯರ ಸಲಹೆ ಪಡೆದು ಸೂಕ್ತ ತಪಾಸಣೆ, ಚಿಕಿತ್ಸೆ ಪಡೆಯುವುದು ಅಗತ್ಯ ಎಂದರು.
ನೇತ್ರ ತಜ್ಞೆ ಡಾ.ಸುಧಾ ಮಾತನಾಡಿ, ಸಕ್ಕರೆ ಕಾಯಿಲೆ, ರಕ್ತದ ಒತ್ತಡ ಇರುವವವರು ಕನಿಷ್ಠ ಆರು ತಿಂಗಳಿಗೊಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು. ಕಣ್ಣಿನ ಪೊರೆ ಸಾಮಾನ್ಯವಾಗಿದ್ದು, ಪೊರೆಯನ್ನು ಶಸ ಚಿಕಿತ್ಸೆ ಮೂಲಕ ತೆಗೆಯಲಾಗುತ್ತದೆ. ಸರಳ ಶಸಚಿಕಿತ್ಸೆಯಾಗಿದ್ದು, ರೋಗಿಗಳು ಶಸ ಚಿಕತ್ಸೆ ನಂತರ ವೈದ್ಯರು ಸೂಚಿಸಿದಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳಾದ ಗೇರ್‌ಬೈಲ್ ಶಂಕರಪ್ಪ, ಎ.ಎಸ್.ನಯನ, ಎಚ್.ಜಿ.ದೇವೇಂದ್ರ, ಕಳಸಪ್ಪ, ರಾಜಶೇಖರ್ ಇತರರು ಇದ್ದರು.