ಲೋಕೋಪಯೋಗಿ ಉಪವಿಭಾಗ ಸ್ಥಳಾಂತರ

Sub_Relocation
Published on

ಸುಬ್ರಹ್ಮಣ್ಯ: ಲೋಕೋಪಯೋಗಿ ಇಲಾಖೆಯ ವಿಶೇಷ ಉಪವಿಭಾಗ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಶ್ಲೇಷ ವಸತಿ ಗೃಹದ ನೆಲ ಅಂತಸ್ತಿನಲ್ಲಿ ಉದ್ಘಾಟನೆಗೊಂಡಿತು. ಈ ಹಿಂದೆ ಶ್ರೀ ದೇವಳದ ಆದಿ ಸುಬ್ರಹ್ಮಣ್ಯದ ಅನಘ ವಸತಿಗೃಹದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಚೇರಿ ಇದೀಗ ಸ್ಥಳಾಂತರಗೊಂಡು ಉದ್ಘಾಟನೆಗೊಂಡಿತು. ಕುಲ್ಕುಂದ ಬಸವೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ ದೀಕ್ಷಿತ್ ಗಣಹೋಮದ ವಿಧಿವಿಧಾನ ನಡೆಸಿಕೊಟ್ಟರು.

ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಪ್ರಮೋದ್ ಕುಮಾರ್ ಕೆ.ಕೆ, ಸಹಾಯಕ ಅಭಿಯಂತ ಜನಾರ್ದನ, ಸಿಬ್ಬಂದಿ ಸುಬ್ರಹ್ಮಣ್ಯ ನೂಚಿಲ, ಶಿವರಾಮ ಡಿ, ತಾರನಾಥ ಕೋನಡ್ಕ, ಜಗದೀಶ, ನಿತೀಶ್, ಭವ್ಯಾ ಉಪಸ್ಥಿತರಿದ್ದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ದೇವಳದ ಅಭಿಯಂತ ಉದಯ್ ಕುಮಾರ್, ಆರೋಗ್ಯ ನಿರೀಕ್ಷಕ ಯೋಗೀಶ್ ಎಂ.ವಿಟ್ಲ, ವಿದ್ಯುತ್ ಮೇಲ್ವಿಚಾರಕ ಅಭಿಯಂತ ಚೇತನ್, ಮಾಸ್ಟರ್‌ಪ್ಲಾನ್ ಸಮಿತಿ ಸದಸ್ಯರಾದ ಲೋಲಾಕ್ಷ ಕೈಕಂಬ, ಅಚ್ಚುತ ಗೌಡ ಆಲ್ಕಬೆ, ಶ್ರೀ ದೇವಳದ ಸುಬ್ಬಪ್ಪ ಎನ್.ಸಿ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ ನಡುತೋಟ, ಗುತ್ತಿಗೆದಾರ ಪ್ರಕಾಶ್ ಶೆಟ್ಟಿ ಕುಂದಾಪುರ, ಲಕ್ಷ್ಮಣ, ಗ್ರಾ.ಪಂ. ಸದಸ್ಯರಾದ ರಾಜೇಶ್ ಎನ್.ಎಸ್, ಗಿರೀಶ್ ಆಚಾರ್ಯ ಪೈಲಾಜೆ, ದಿಲೀಪ್ ಉಪ್ಪಳಿಕೆ, ಸ್ಥಳೀಯರಾದ ಗಣೇಶ್ ಕಾಶಿಕಟ್ಟೆ ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net